ಕಾಸರಗೋಡು: ಶೈಕ್ಷಣಿಕ ಉಪ ಜಿಲ್ಲಾ ವಿಜ್ಞಾನ ಮೇಳವು ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಕ್ಟೋಬರ್ 13 ಹಾಗೂ 14 ರಂದು ನಡೆಯಲಿದ್ದು, ಪೂರ್ವಭಾವಿಯಾಗಿ ಸ್ವಾಗತ ಸಮಿತಿ ರಚನಾ ಸಭೆ ಶಾಲೆಯಲ್ಲಿ ಜರುಗಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಸಮಾರಂಭ ಉದ್ಘಾಟಿಸಿದರು. ಚೆಂಗಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಫಿಯಾ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್. ಎ. ನೆಲ್ಲಿಕ್ಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಸರಗೋಡು ಶೈಕ್ಷಣಿಕ ಉಪ ಜಿಲ್ಲಾ ಶಿಕ್ಷಣಾಧಿಕಾರಿ ಅಗಸ್ಟಿನ್ ಬರ್ನಾರ್ಡ್ ಮೇಳದ ಬಗ್ಗೆ ಮಾಃಇತಿ ನೀಡಿದರು. ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಇ. ವೇಣುಗೋಪಾಲ್, ಕೆ. ಮಾಧವ ಹೇರಳ, ಎ. ಎನ್. ನಾರಾಯಣನ್, ಗೋಪೀನಾಥನ್ ಕೆ., ವಿನೋದ್ ಕುಮಾರ್ ಪೆರುಂಬಳ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲ ಪಿ. ಪ್ರಭಾಕರನ್ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿಲಕ್ಷ್ಮಿ. ಎಸ್. ವಂದಿಸಿದರು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಗೌರವಾಧ್ಯಕ್ಷರಾಗಿರುವ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸಂಚಾಲಕರಾಗಿ ಕೆ. ಸುಕುಮಾರನ್, ಅಧ್ಯಕ್ಷರಾಗಿ ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್ ಬದ್ರಿಯಾ ಅವರನ್ನು ಆಯ್ಕೆ ಮಾಡಲಾಯಿತು.





