ಪೆರ್ಲ: ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ, ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಶಾರದಾ ಮರಾಟಿ ಮಹಿಳಾ ವೇದಿಕೆ ಪೆರ್ಲ ವತಿಯಿಂದ ಮರಾಟಿ ಸಮಾಜ ಬಾಂಧವರಿಗಾಗಿ ಕ್ರೀಡಾಕೂಟ, ರಸಪ್ರಶ್ನೆ, ಚಿತ್ರ ಕಲಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ಪೆರ್ಲ ಶ್ರೀ ಶಾರದಾ ಮರಾಟಿ ಸಭಾ ಭವನ ವಠಾರದಲ್ಲಿ ನಡೆದ ಸ್ಪರ್ಧಾಕೂಟವನ್ನು ಪೆರಿಯ ತಾಂತ್ರಿಕ ಶಿಕ್ಷಣ ಶಾಲೆ ಪ್ರಾಧ್ಯಾಪಕ ಪುರಂದರ ಮಾಸ್ಟರ್ ಉದ್ಘಾಟಿಸಿದರು. ಎಣ್ಮಕಜೆ ಗ್ರಾಪಂ ಮಾಜಿ ಅಧ್ಯಕ್ಷೆ ಪುಷ್ಪ ಅಮೆಕ್ಕಳ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಪೆÇಲೀಸ್ ಅಧಿಕಾರಿ ನಾಗೇಶ್ ನಾಯ್ಕ್, ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ ಬಿ ಜಿ ನಾಯ್ಕ್, ಡಾ ನಾರಾಯಣ ನಾಯ್ಕ್, ಡಾ ಶಿವ ನಾಯ್ಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕುಸುಮಾವತಿ ಟೀಚರ್ ಪ್ರಾರ್ಥನೆ ಹಾಡಿದರು. ಗೋಪಿಕೃಷ್ಣ ಬದಿಯಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು. ಮರಾಟಿ ಮಹಿಳಾ ವೇದಿಕೆಯ ಅಧ್ಯಕ್ಷೆ ವಾರಿಜಾ ಅಡ್ಯನಡ್ಕ ವಂದಿಸಿದರು.





