ಕಾಸರಗೋಡು: ಐಸಿಎಆರ್-ಸಿಪಿಸಿಆರ್.ಐ ಕಾಸರಗೋಡಿನಲ್ಲಿ 2 ವರ್ಷದ ತೆಂಗಿನ ಸಸಿಗಳನ್ನು ಮೂಲ ಬೆಲೆಯ ಅರ್ಧದಷ್ಟು ದರಕಡಿತದೊಂದಿಗೆ ಮಾರಾಟ ಮಾಡಲು ನಿರ್ಧರಿಸಿದೆ. ಇದು ಪ್ರಕಟಣೆ ಹೊರಡಿಸಲಾದ ದಿನಾಂಕದಂದು ಮಾರಾಟ ಆರಂಭಗೊಳ್ಳಲಿದ್ದು, ದಾಸ್ತಾನಿನಲ್ಲಿರುವ 2 ವರ್ಷದ ಸಸಿಗಳಿಗೆ ಮಾತ್ರ ಅನ್ವಯಿಸುತ್ತದೆ. ರೈತರು ಈ ಸೌಲಭ್ಯವನ್ನು ತಕ್ಷಣದಿಂದ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.




