ಕಾಸರಗೋಡು : ಹಿರಿಯ ನಾಗರಿಕರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ಕೇರಳದಲ್ಲಿ ಕಾರ್ಯಗತಗೊಳಿಸದೇ ರಾಜ್ಯದ ಎಡರಂಗ ಸರ್ಕಾರ ವಯೋವೃದ್ಧ ನಾಗರಿಕರನ್ನು ಅವಗಣಿಸಿರುವುದಾಗಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ತಿಳಿಸಿದ್ದಾರೆ.
ಅವರು ವಿಕಸಿತ ಕೇರಳ ಯೋಜನೆಯಂಗವಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಹೆಲ್ಪ್ ಡೆಸ್ಕ್ ಮೇಲ್ನೋಟದಲ್ಲಿ ಆರ್ಟಿಫಿಷಿಯಲ್ ಲಿಂಬ್ಸ್ ಮೆನುಫ್ಯಾಕ್ಚರಿಂಗ್ ಕಾಪೆರ್Çರೇಷನ್ ಆಫ್ ಇಂಡಿಯ ಸಹಕಾರದೊಂದಿಗೆ ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯಾಲಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ವಯೋಶ್ರೀ ಯೋಜನಾ ಸ್ಕ್ರೀನಿಂಗ್ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಉತ್ಸವ ಸಂದರ್ಭದಲ್ಲಿ ಹೆಸರಿಗೆ ಮಾತ್ರ ಪಿಂಚಣಿ ವಿತರಿಸಿ ಕೇರಳ ಸರ್ಕಾರ ವಯೋಜನರನ್ನು ವಂಚಿಸುತ್ತಿದೆ. ಜನತಾ ಕಲ್ಯಾಣ ಯೋಜನೆಗಳ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ಜನತೆಗೂ ಸಮಾನ ಪರಿಗಣನೆಯೊಂದಿಗೆ ಸವಲತ್ತು ನೀಡುತ್ತಿರುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಪ್ರಧಾನ ಕಾರ್ಯದರ್ಶಿ ಪಿ. ಆರ್. ಸುನಿಲ್, ಎನ್. ಬಾಬುರಾಜ್ ಮೊದಲಾದವರು ಉಪಸ್ಥಿತರಿದ್ದರು. ಆರ್ಟೀಫಿಷ್ಯಲ್ ಲಿಂಬ್ಸ್ ಮೆನುಫ್ಯಾಕ್ಚರಿಂಗ್ ಕಾಪೆರ್Çೀರೇಷನ್ ಆಫ್ ಇಂಡಿಯಾ ಆಶ್ರಯದಲ್ಲಿರುವ ಕೋಯಿಕ್ಕೋಡ್ ಕೇಂದ್ರದ ಮುಖ್ಯಸ್ಥ ದಿವ್ಯಶ್ರೀ, ಅಜಿvತ್‍ಕುಮಾರ್, ಬದಿಯಡ್ಕ ಮಾರ್ತೋಮ ಕಾಲೇಜ್ ಆಫ್ ಸ್ಪೆಷಲ್ ಎಜ್ಯುಕೇಶನ್ ಸೆಂಟರಿನ ಆಡಿಯೋಲಜಿಸ್ಟ್ ಫೆಬಿನ್ ಬಾಬು ತಪಾಸಣೆಗೆ ನೇತೃತ್ವ ನೀಡಿದರು.
200ಮಂದಿ ವಯೋಜನತೆ ಶಿಬಿರದಲ್ಲಿ ಪಾಲ್ಗೊಂಡರು. ಸ್ಕ್ರೀನಿಂಗ್ ವರದಿಯಂತೆ ಅರ್ಹತೆಯನುಸಾರ ಮುಂದಿನ ದಿನಗಳಲ್ಲಿ ಅರ್ಹರಿಗೆ ವಿವಿಧ ಸಹಾಯೋಪಕರಣಗಳನ್ನು ವಿತರಿಸಲಾಗುವುದು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಗೋಪಾಲನ್, ಮಹೇಶ್ ಗೋಪಾಲ್, ಪ್ರಮೀಳಾ ಮಜಲ್, ಕೆ. ಎಂ. ಅಶ್ವಿನಿ, ಎಸ್. ಟಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿಬು ಪಾಣತ್ತೂರ್, ಮಹಿಳಾ ಮೋರ್ಛಾ ಜಿಲ್ಲಾಧ್ಯಕ್ಷೆ ಕೆ. ಎಸ್. ರಮಣಿ, ಯುವಮೋರ್ಛಾ ಜಿಲ್ಲಾಧ್ಯಕ್ಷ ಅಶ್ವಿನ್ ಮೊಜಲಾದವರು ನೇತೃತ್ವ ನೀಡಿದರು.





