ಬದಿಯಡ್ಕ: ಎಡನೀರು ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಐದನೇ ವರ್ಷದ ಆರಾಧನಾ ಮಹೋತ್ಸವ ಸೆ. 11ರಂದು ಶ್ರೀಮಠದಲ್ಲಿ ಜರುಗಲಿದೆ. ಬೆಳಗ್ಗೆ 9ಕ್ಕೆ ಧ್ವಜಾರೋಹಣ ನಡೆಯುವುದು. ನಂತರ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಖಿಲ ಭಾರತ ಕುಟುಂಬ ಪ್ರಬೋಧಕ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಆಶಯ ಭಾಷಣ ಮಾಡುವರು. 9.30ಕ್ಕೆ ವೇಣುವಾದನ ನಡೆಯುವುದು.
ಮಧ್ಯಾಃನ 2.30ಕ್ಕೆ ನಡೆಯುವ ಆರಾಧನೋತ್ಸವ ಮಹಾ ಸಭೆಯಲ್ಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಸರ್ಕಾರದ ಮಾನವಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಶ್ಯಾಮ ಭಟ್ ಐಎಎಸ್ ಗೌರವ ಉಪಸ್ಥಿತರಿರುವರು.
ಈ ಸಂದರ್ಭ ಕುಮಟಾದ ಶಾಂತಿಕಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ, ಸಾಮಾಜಿಕ ಧುರೀಣ ಕೃಷ್ಣ ಬಾಬಾ ಪೈ ಅವರಿಗೆ ಶ್ರೀ ಕೇಶವಾನಂದ ಭಾರತೀ ಸ್ಮøತಿ ಗೌರವ ಪ್ರದಾನ ಮಾಡಲಾಗುವುದು.ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ಅಭಿನಂದನಾ ನುಡಿಗಳನ್ನಾಡುವರು. ಚಿತ್ರನಟ ಕಾಸರಗೋಡು ಚಿನ್ನಾ ನಿರೂಪಿಸುವರು.



