ಕಾಸರಗೋಡು: ಕೇರಳ ಔಷಧ ವಿತರಕರ ಸಂಘ (ಕೆಎಂಡಿಎ) ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಜಿಲ್ಲೆಯಲ್ಲಿ ವೈದ್ಯಕೀಯ ಸಗಟು ಔಷಧ ಪರವಾನಗಿಯನ್ವಯ ಅನುಮೋದನೆ ಪಡೆದ ಸಮರ್ಥ ವ್ಯಕ್ತಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸಮಾರಂಭ ಉದ್ಘಾಟಿಸಿದರು. ಕೆಎಂಡಿಎ ಜಿಲ್ಲಾ ಸಮಿತಿ ಅಧ್ಯಕ್ಷ ಮುಹಮ್ಮದ್ ರಹೀಸ್ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಕೆ.ವಿ. ಸುಧೀಶ್ ಅವರು ಔಷಧಿಗಳ ಬಗೆಗಿನ ಕಾನೂನು, ಜವಾಬ್ದಾರಿಗಳು ಮತ್ತು ಔಷಧದ ನಿರ್ವಹಣೆಯ ಕುರಿತು ತರಗತಿ ನಡೆಸಿದರು. ನೂರಕ್ಕೂ ಹೆಚ್ಚುಮಂದಿಸದಸ್ಯರು ಭಾಗವಹಿಸಿದ್ದರು. ಕೆಎಂಡಿಎ ರಾಜ್ಯ ಜಂಟಿ ಕಾರ್ಯದರ್ಶಿ ಕನಕರಾಜನ್ ಉಪಸ್ಥಿತರಿದ್ದರು. ಕೆಎಂಡಿಎ ಜಿಲ್ಲಾ ಕಾರ್ಯದರ್ಶಿ ಚೇತನ್ ಕುಮಾರ್ ಕೆ ಸ್ವಾಗತಿಸಿದರು. ಉಪಾಧ್ಯಕ್ಷ ಬ್ರಿಜೇಶ್ ಬಿ.ಆರ್ ವಂದಿಸಿದರು.




