ಕಾಸರಗೋಡು: ಬೇಕಲ್ ಫೆಸ್ಟ್ ಭಾರತದ ಅತ್ಯಂತ ಗಮನಾರ್ಹ ಕರಾವಳಿ ಉತ್ಸವಾಗಿ ಬದಲಾಗಿದೆ ಎಂದು ಶಾಸಕ ಸಿ.ಎಚ್.ಕುಂಞಂಬು ಹೇಳಿದರು.
ಅವರು ಬೇಕಲ್ ಅಂತರರಾಷ್ಟ್ರೀಯ ಉತ್ಸವದ ಮೂರನೇ ಆವೃತ್ತಿಯ ಅಂಗವಾಗಿ ಬೇಕಲ್ ಬೀಚ್ ಪಾರ್ಕ್‍ನಲ್ಲಿ ನಡೆದ ಸಂಘಟನಾ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದರು. ಬೀಚ್ ಮತ್ತು ಕೋಟೆಯನ್ನು ಹೊಂದಿರುವ ಪ್ರಕೃತಿಯ ಕೊಡುಗೆಯಾಗಿರುವ ಬೇಕಲ್, ಬಿಆರ್‍ಡಿಸಿ ಅಭಿವೃದ್ಧಿ ಯೋಜನೆಯನ್ವಯ ಪ್ರವಾಸಿಗರ ಆಕರ್ಷಕ ತಾಣವಾಗಿ ಬದಲಾಗಿದೆ. ಈ ಬಾರಿ ಬೀಚ್ ಫೆಸ್ಟ್ ಜೊತೆಗೆ ಕುಟುಂಬಶ್ರೀಯ ಸರಸ್ ಮೇಳವನ್ನು ಆಯೋಜಿಸಲಾಗುವುದು. ಕೆಟಿಡಿಸಿ ನೆಲದಲ್ಲಿ ಆಯೋಜಿಸಲಾದ ಉತ್ಸವದಲ್ಲಿ ಪಕ್ಷ ಅಥವಾ ರಾಜಕೀಯ ಸಂಬಂಧವನ್ನು ಲೆಕ್ಕಿಸದೆ ಎಲ್ಲರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಶಾಸಕ ಸಿ.ಎಚ್ ಕುಞಂಬು ಅಧ್ಯಕ್ಷ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸಂಚಾಲಕರಾಗಿರುವ 501ಮಂದಿಯನ್ನೊಳಗೊಂಡ ಸಂಘಟನಾ ಸಮಿತಿಯನ್ನು ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಕುಮಾರನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕುಞÂರಾಮನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ವಿಜಯನ್, ಪುಲ್ಲೂರು ಪೆರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್, ಬೇಡಡ್ಕ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ, ಚೆಮ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಫೈಜಾ ಅಬೂಬಕ್ಕರ್, ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ, ಪಳ್ಳಿಕ್ಕೆರೆ ಗ್ರಾಪಂ ಉಪಾಧ್ಯಕ್ಷೆ ರಾಜಣ್ಣ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ನಸ್ರಿನ್ ವಹಾಬ್, ಕೆ.ಇ.ಎ. ಬಕ್ಕರ್, ಎಂ ಎ ಲತೀಫ್, ಶೈನಿ ಉಪಸ್ಥಿತರಿದ್ದರು. ಬಿಆರ್‍ಡಿಸಿ ಎಂಡಿ ಪಿ.ಪಿ ಶಿಜಿನ್ ಸ್ವಾಗತಿಸಿದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಕೆ ರತೀಶ್ ಕುಮಾರ್ ವಂದಿಸಿದರು.




