ಕಾಸರಗೋಡು: ಸಾರ್ವಜನಿಕ ಬೆಂಬಲ ಪಕ್ಷಾಚರಣೆಯ ರಾಜ್ಯ ಮಟ್ಟದ ಉದ್ಘಾಟನೆಯ ಸಂಘಟನಾ ಸಮಿತಿ ರಚನಾ ಸಭೆ ಕಾಞಂಗಾಡು ತಾಲೂಕು ಕಚೇರಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಸಮಾರಂಭ ಉದ್ಘಾಟಿಸಿದರು.
ಅಕ್ಟೋಬರ್ 2 ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯಮಟ್ಟದ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಮಾರಂಭದ ಯಶಸ್ವಿಗೆ ಎಲ್ಲಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವರ್ಗ ಸಹಕರಸಬೇಕು. ಜಿಲ್ಲೆಯ ವಿವಿಧ 'ಉನ್ನತಿ'ಗಳ ಜನರನ್ನು ಕಾಞಂಗಾಡಿಗೆ ತಲುಪಿಸಲು ಅಗತ್ಯ ಸಾರಿಗೆ ವ್ಯವಸ್ಥೆ ಯನ್ನು ಕಲ್ಪಿಸಿಕೊಡಬೇಕೆಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಕಾಞಂಗಾಡು ನಗರಸಭಾ ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದರು. ರಾಜ್ಯ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ಸಹಾಐಕ ನಿರ್ದೇಶಕ ಕೆ. ಕೆ. ಶಾಜು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಮಾಜಿ ಶಾಸಕ ಎಂ. ಕುಮಾರನ್, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ. ಲತಾ, ಕಾಞoಗಾಡ್ ಡಿವೈಎಸ್‍ಪಿ. ಸಿ. ಕೆ ಸುನಿಲ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪರಿಶಿಷ್ಟ ವರ್ಗ ಅಭಿವೃದ್ಧಿ ಅಧಿಕಾರಿ ಕೆ. ಸಿ. ಅಯ್ಯಪ್ಪನ್ ಸ್ವಾಗತಿಸಿದರು. ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಒ. ಪಿ. ರಾಧಾಕೃಷ್ಣನ್ ವಂದಿಸಿದರು.
ಪರಿಶಿಷ್ಟ ವಿಭಾಗ ಮತ್ತು ಹಿಂದುಳಿದ ವರ್ಗ ಅಭಿವೃದ್ಧಿ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅಕ್ಟೋಬರ್ 2ರಿಂದ 15 ರ ವರೆಗೆ ಸಾರ್ವಜನಿಕ ಐಕ್ಯದಾಢ್ರ್ಯ ಪಕ್ಷಾಚರಣೆ ನಡೆಯಲಿದ್ದು ಶಿಕ್ಷಣ, ಆರೋಗ್ಯ, ಉದ್ಯೋಗ ಕಾರ್ಯಕ್ರಮಗಳಿಗೆ ಪ್ರತ್ಯೇಕ ಆಧ್ಯತೆ ನೀಡಲಾಗುತ್ತದೆ.
"ಜ್ಞಾನ ಮತ್ತು ಉದ್ಯೋಗದ ಕಡೆಗೆ ಸಾಗೋಣ" ಎಂಬುದು ಈ ವರ್ಷದ ಸಾರ್ವಜನಿಕ ಐಕ್ಯದಾಢ್ರ್ಯ ಪಕ್ಷಾಚರಣೆ ಧ್ಯೇಯವಾಕ್ಯವಾಗಿದೆ. ಮಂಗಳವಾರ ಅಪರಾಹ್ನ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾಞಂಗಾಡಿನಲ್ಲಿ ಉದ್ಘಾಟಿಸಲಿರುವ ರಾಜ್ಯ ಮಟ್ಟದ ಕಾರ್ಯಕ್ರಮದ ಸಮಾರೋಪ ಸಮಾರಂಭ ತಿರುವನಂತಪುರಂದಲ್ಲಿ ನಡೆಯಲಿದೆ.




