HEALTH TIPS

ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಕಾಸರಗೋಡು ದಸರಾ ಕಾರ್ಯಕ್ರಮ

ಕಾಸರಗೋಡು: ನವರಾತ್ರಿ ಉತ್ಸವ ಅಂಗವಾಗಿ ದಸರಾ ಸಾಂಸ್ಕøತಿಕೋತ್ಸವ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಜರುಗಿತು.  ಪಾಂಗೋಡು ಕ್ಷೇತ್ರ ಪಾತ್ರಿ ಹಾಗೂ ಸಾಂಸ್ಕೃತಿಕ ಘಟಕ ಅಧ್ಯಕ್ಷ ಪಾಂಗೋಡು ಪ್ರವೀಣ್ ನಾಯಕ ಸಮಾರಂಭ  ಉದ್ಘಾಟಿಸಿದರು.   ಈ ಸಂದರ್ಭ "ರಾಮಕ್ಷತ್ರಿಯ ಸಮಾಜ ನಡೆದು ಬಂದ ಹಾದಿ "ಎಂಬ ವಿಷಯದಲ್ಲಿ ನಡೆದ ವಿಚಾರಗೋಷ್ಠಿ ಹಾಗೂ ಸಮಾಜಕ್ಕೆ ಸಂಘ ಕಲ್ಪನೆ ಕೊಟ್ಟ ಪ್ರಾಥಸ್ಮರಣೀಯ "ನಾಯಕರ ಸಂಸ್ಮರಣೆ -ನುಡಿನಮನ ಕಾರ್ಯಕ್ರಮ ನಡೆಯಿತು.  ಕನ್ನಡ ಭವನ ಸಂಸ್ಥಾಪಕ ಡಾ. ವಾಮನ ರಾವ್ ಬೇಖಲ್ ಅಧ್ಯಕ್ಷತೆ ವಹಿಸಿದ್ದರು.

ವಿಶ್ವ ರಾಮಕ್ಷತ್ರಿಯ ಮಹಾಸಂಘ ಸಂಪಾದಕಿ ಶ್ರೀಮತಿ ರೇಖಾ ಸುದೇಶ್ ರಾವ್ ವಿಚಾರ ಮಂಡಿಸಿ ಮಾತನಾಡಿ, ಅವರು ರಾಮಕ್ಷತ್ರಿಯ ಸಮಾಜದ ಸಮಗ್ರ ಇತಿಹಾಸದ ಬಗ್ಗೆ ಸಂಶೋಧನೆ, ದಾಖಲೀಕರಣ, ಸಂಸ್ಮರಣೆ ಸಂಬಂದಿಸಿದ "ರಾಷ್ಟ್ರೀಯ ವಿಚಾರ ಸಂಕಿರಣ - ವಿಚಾರ ಗೋಷ್ಠಿ ಆಯೋಜಿಸಬೇಕಾಗಿದೆ ಎಂದು ತಿಳಿಸಿದರು.   ಲೇಖಕ, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ, ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್ ಕೂಡ್ಲು ವಿಚಾರ ಮಂಡಿಸಿ ಮಾತನಾಡಿ, ಸಂಘಟನೆಯಿಂದ ಮಾತ್ರವೇ ಪ್ರಗತಿ ಸಾಧ್ಯ. ವೆಂಕಟ್ರಮಣಯ್ಯನವರ ದೂರದರ್ಶಿತ್ವ ಹಾಗೂ  ಸಂಘಟಿತ ಪ್ರಯತ್ನದಿಂದ ರಾಮರಾಜ ಕ್ಷತ್ರಿಯ ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯವಾಗಿದೆ ಎಂದುತಿಳಿಸಿದರು. 

ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಗೌರವಾಧ್ಯಕ್ಷ ಕೆ. ನಿರಂಜನ್ ಕೊರಕ್ಕೊಡು ಅವರು ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಹಾಗೂ ನಾಯಕರ ವೆಂಕಟ್ರಮಣಯ್ಯ ಯಾನೆ ಜಟೆನಾಯಕರ ಭಾವ ಚಿತ್ರಕ್ಕೆ ಹಾರಾರ್ಪಣೆ ಮಾಡಿದರು. ಬಿ. ಜೆ. ಪಿ. ದ. ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ. ಮಂಜುಳಾ ಅನಿಲ್ ರಾವ್, ಕನ್ನಡ ಭವನದ ದ.ಕ ಜಿಲ್ಲಾ ಕಾರ್ಯಧ್ಯಕ್ಷ ಉಮೇಶ್ ರಾವ್ ಕುಂಬಳೆ, ರಾಮರಾಜ ಕ್ಷತ್ರಿಯ ಜಿಲ್ಲಾ ಮಹಿಳಾ ಸಂಘ ಗೌರವಾಧ್ಯಕ್ಷೆ ಆಶಾ ರಾಧಾಕೃಷ್ಣ, ಜಿಲ್ಲಾ ಸಂಘ ಉಪಾಧ್ಯಕ್ಷೆ ಉಷಾ ಕಿರಣ್, ಕನ್ನಡ ಭವನ ಪ್ರಕಾಶನ ಮುಖ್ಯಸ್ಥೆ ಸಂದ್ಯಾ ರಾಣಿ ಟೀಚರ್. ಕನ್ನಡ ಭವನ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೋಟೆಕಣಿ, ಪಾಂಗೋಡು ಕ್ಷೇತ್ರ ಸಮಿತಿ ಜತೆ ಕಾರ್ಯದರ್ಶಿ ಪ್ರದೀಪ್ ನಾಯಕ್ ನಾಗರಕಟ್ಟೆ ಉಪಸ್ಥಿತರಿದ್ದರು.  ಸಂದ್ಯಾ ರಾಣಿ ಟೀಚರ್ ಸ್ವಾಗತಿಸಿದರು. ಉಷಾ ಕಿರಣ್ ಕಾರ್ಯಕ್ರಮ ನಿರೂಪಿಸಿದರು.ರಾಜೇಶ್ ಕೋಟೆಕಣಿ ವಂದಿಸಿದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries