ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯಿತಿಯ 2023-24ನೇ ವಾರ್ಷಿಕ ಯೋಜನೆಯನ್ವಯ ಪೆರ್ಲ ಶ್ರೀ ಸತ್ಯನಾರಾಯಣ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಸುಸಜ್ಜಿತವಾದ ಶೌಚಗೃಹ ಸಮುಚ್ಛಯದ ಉದ್ಘಾಟನೆಯನ್ನು ಎಣ್ಮಕಜೆ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಜೆ. ಎಸ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ನಾಡಿನ ಪುರೋಗತಿಗೆ ಸಹಾಯಕವಾಗಿದ್ದು, ಮೂಲಸೌಕರ್ಯಗಳ ವೃದ್ಧಿಯಿಂದ ಶೈಕ್ಷಣಿಕ ಸಂಸ್ಥೆಗಳ ಏಳಿಗೆಯೂ ಸಾಧ್ಯ. ಮಕ್ಕಳಲ್ಲಿ ಶುಚಿತ್ವದ ಬಗ್ಗೆ ಎಳವೆಯಿಂದಲೇ ಜಾಗೃತಿ ಮೂಡಿಸುವ ಕೆಲಸ ನಡೆದುಬರಬೇಕು ಎಂದು ತಿಳಿಸಿದರು.
ಪೆರ್ಲ ಶ್ರೀಸತ್ಯನಾರಾಯಣ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷ ವೆಂಕಟ್ರಾಜ ಮಿತ್ರ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗಾಂಭೀರ್ ಅತಿಥಿಯಾಗಿ ಭಾಗವಹಿಸಿದ್ದರು. ಶ್ರೀ ಸತ್ಯನಾರಾಐಣ ವಿದ್ಯಾ ಸಂಸ್ಥೆ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಬಜಕೂಡ್ಲು, ಎಂಪಿಟಿಎ ಅಧ್ಯಕ್ಷೆ ಬಿಂದು ಬಣ್ಪುತ್ತಡ್ಕ, ಪಿಟಿಎ ಉಪಾಧ್ಯಕ್ಷ ರವೀಶ್ಚಂದ್ರ ಸೂರ್ಡೆಲು ಶಿಕ್ಷಕಿಯರಾದ ಉಮಾಶಂಕರಿ, ಸುರಕ್ಷಾ ಅಮೃತಾ, ರೇಷ್ಮಾ, ಶಾಂತಾ, ಶಶಿಕಲಾ, ಸುಮಾ, ವಿನೋದಾ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಎನ್ ಸ್ವಾಗತಿಸಿದರು. ಕ್ಷಕ ಶ್ಯಾಮ್ ರಂಜಿತ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸ್ಟಾಫ್ ಕಾರ್ಯದರ್ಶಿ ಉದಯ ಸಾರಂಗ್ ವಂದಿಸಿದರು.





