ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಮೇಳದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ವರ್ಕಾಡಿ ಗ್ರಾಮ ಪಂಚಾಐಇತಿ ಅಧ್ಯಕ್ಷೆ ಭಾರತಿ. ಎಸ್ ಅವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಯಾಗಿ ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ತಾ ಭಾಗವಹಿಸಿದ್ದರು. ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ವಿ.ಆರ್ ಸಾಮಾನಿ, ಶಾಲಾ ಪ್ರಾಂಶುಪಾಲ ವಿಜಯಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಕೃಷ್ಣವೇಣಿ, ವರ್ಕಾಡಿ ಪಂಚಾಯಿತಿ ಪಿ.ಇ.ಸಿ ಸೆಕ್ರೆಟರಿ ಪ್ರತಿಭಾ ಟೀಚರ್, ಶ್ರೀವಾಣಿ ವಿಜಯ ಎ. ಯು.ಪಿ ಶಾಲಾ ಪಿಟಿಎ ಅಧ್ಯಕ್ಷ ಮೊಹಮ್ಮದ್ ರಫೀಕ್, ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯ ಶಾಲೆಯ ಪಿ.ಟಿ.ಎ ಉಪಾಧ್ಯಕ್ಷ ಮೋಹನ್. ಬಿ, ಮನವಾಟಿ ಬೀವಿ ಶಾಲಾ ಮುಖ್ಯಶಿಕ್ಷಕ ಮೂಸಾಕುಞÂ, ಇತರ ಸಮಿತಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಆಶಾ ಟೀಚರ್ ಸ್ವಾಗತಿಸಿದರು. ಪೂರ್ಣಿಮಾ ಟೀಚರ್ ನಿರೂಪಿಸಿದರು. ಸ್ಮಿತಾ ಟೀಚರ್ ವಂದಿಸಿದರು.





