ಕಾಸರಗೋಡು: ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ಕೇಂದ್ರಗಳಾದ ಬೇಕಲ ಬೀಚ್ ಪಾರ್ಕ್ ಮತ್ತು ರಾಣಿಪುರಂ ಪ್ರದೇಶಗಳಿಗೆ ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಎ. ಜಯತಿಲಕ್ ಐಎಎಸ್ ಭೇಟಿ ನೀಡಿ ಅಭಿವೃದ್ಧಿ ಚಟುವಟಿಕೆಗಳನ್ನು ಪರಿಶೀಲಿಸಿದರು.
ರಾಣಿಪುರಂನಲ್ಲಿ ನಡೆಯುತ್ತಿರುವ ಚಾರಣ ಚಟುವಟಿಕೆಗಳ ವಿಶೇಷ ಪರಿಶೀಲನೆ ನಡೆಸಿದ ಮುಖ್ಯ ಕಾರ್ಯದರ್ಶಿ, ಅಲ್ಲಿನ ಅರಣ್ಯ ಸಂಪನ್ಮೂಲ, ವ್ಯಾಪಾರಿ ಮಳಿಗೆ ಮತ್ತು ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿಯ ರೆಸಾರ್ಟ್‍ಗೆ ಭೇಟಿ ನೀಡಿದರು. ಸಮುದ್ರ ಕೊರೆತದಿಂದ ಹಾನಿಗೀಡಾಗಿರುವ ಬೇಕಲ್ ಬೀಚ್ ಪಾರ್ಕ್‍ಗೂ ಭೇಟಿ ನೀಡಿದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಐಎಎಸ್ ಅವರು ಮುಖ್ಯ ಕಾರ್ಯದರ್ಶಿಯವರೊಂದಿಗೆ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದರು. ಸಮುದ್ರ ಕೊರೆತ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಯವರು ಸೂಚನೆ ನೀಡಿದರು. ನಂತರ ಬೇಕಲ್ ತಾಜ್ ಗೇಟ್‍ವೇ ರೆಸಾರ್ಟ್‍ನಲ್ಲಿ ನಡೆದ ಬೇಕಲ್ ರೆಸಾಟ್ರ್ಸ್ ಅಭಿವೃದ್ಧಿ ನಿಗಮದ 103 ನೇ ಮಂಡಳಿ ಸಭೆಯಲ್ಲಿ ಭಾಗವಹಿಸಿದರು.
ಸಭೆಯಲ್ಲಿ ಶಾಸಕ ಸಿ. ಎಚ್. ಕುಂಞಂಬು, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಉಪಸ್ಥಿತರಿದ್ದರು.ಶೇಖರ್. ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕಾರ್ಯದರ್ಶಿ ಕೆ. ಬಿಜು, ಪ್ರವಾಸೋದ್ಯಮ ನಿರ್ದೇಶಕಿ ಶಿಖಾ ಸುರೇಂದ್ರನ್, ಬಿಆರ್‍ಡಿಸಿ ಎಂಡಿ ಪಿ. ಶಿಜಿನ್ ಉಪಸ್ಥಿತರಿದ್ದರು.





