ಬದಿಯಡ್ಕ: ನೀರ್ಚಾಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಮಹಾಸಭೆ ಭಾನುವಾರ ಸಂಜೆ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ ಪರಿಸರದಲ್ಲಿ ನಡೆಯಿತು.
ಸಮಿತಿಯ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್.ಕೆ.ಗೋಪಾಲಕೃಷ್ಣ ಭಟ್ ಪ್ರಸಕ್ತ ವರ್ಷದ ಶ್ರೀಗಣೇಶೋತ್ಸವದ ಲೆಕ್ಕಪತ್ರ ಮಂಡಿಸಿದರು. ಬಳಿಕ ವಿಷಯಾಧಾರಿತ ಚರ್ಚೆ, ಅವಲೋಕನ ಹಾಗೂ ನೂತನ ಸಮಿತಿ ರಚನೆ ನಡೆಯಿತು. ಚಂದ್ರಹಾಸ ರೈ ಏವುಂಜೆ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಈ ಸಂದರ್ಭ ಆಯ್ಕೆಮಾಡಲಾಯಿತು.
ಸೀತಾರಾಮ ಆಚಾರಿ, ಸುಬ್ಬ ಮಣಿಯಾಣಿ, ಬಾಲಸುಬ್ರಹ್ಮಣ್ಯ ಪೆರ್ವ, ಕಿರಣ, ನಾಗೇಶ್ ನಾಯಕ್ ಎನ್, ದಾಮು, ಹರಿ ಕುಮಾರಮಂಗಲ, ಬಿಜೇಶ್, ಪ್ರವೀಣ ಬೇಳ, ವಿಷ್ಣು ಶರ್ಮ ನೂಜಿಲ ಮಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು. ಎಸ್.ಕೆ.ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಚಂದ್ರಹಾಸ ರೈ ವಂದಿಸಿದರು.




.jpg)
.jpg)
