ವಾಷಿಂಗ್ಟನ್: ಅಮೆರಿಕದ ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ ಅವರ ಸಾವಿನ ತನಿಖೆಯಲ್ಲಿನ ಪ್ರಮಾದಕ್ಕಾಗಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‍ಬಿಐ) ನಿರ್ದೇಶಕ ಕಶ್ ಪಟೇಲ್ ಶಾಸಕಾಂಗದ ವಿಚಾರಣೆ ಎದುರಿಸಲಿದ್ದಾರೆ ಎಂದು ವರದಿಯಾಗಿದೆ.
ಕಿರ್ಕ್ ಹತ್ಯೆಯ ತನಿಖೆಯ ಆರಂಭಿಕ ಹಂತದಲ್ಲಿ ಪಟೇಲ್ ಹಲವು ತಪ್ಪುಗಳನ್ನು ಎಸಗಿದ್ದರು, ಅಲ್ಲದೆ ಆರೋಪಿ ಬಂಧನದಲ್ಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಘೋಷಿಸಿದ್ದರು ಎಂದು ಆರೋಪಿಸಲಾಗಿದೆ.
ಪಟೇಲ್ ಮಂಗಳವಾರ ಅಥವಾ ಬುಧವಾರ ಸೆನೆಟ್ ಮತ್ತು ಸದನದ ನ್ಯಾಯಾಂಗ ಸಮಿತಿಯ ಎದುರು ಹಾಜರಾಗಲಿದ್ದು ಪ್ರಶ್ನೆಗಳನ್ನು ಎದುರಿಸಲಿದ್ದಾರೆ.
ಕಿರ್ಕ್ ಹತ್ಯೆಯ ತನಿಖೆಯಲ್ಲಿ ಆಗಿರುವ ಪ್ರಮಾದದ ಬಗ್ಗೆ ಮಾತ್ರವಲ್ಲ, ಎಫ್‍ಬಿಐಗೆ ಸ್ಥಿರತೆ ತರುವ ವಿಶ್ವಾಸವಿದೆಯೇ ಎಂಬ ಪ್ರಶ್ನೆಗೂ ಉತ್ತರಿಸಲಿದ್ದಾರೆ ಎಂದು ವರದಿಯಾಗಿದೆ.
ಅಧ್ಯಕ್ಷ ಟ್ರಂಪ್ ಅವರು ಎಫ್‍ಬಿಐ ನಿರ್ದೇಶಕರ ಹುದ್ದೆಗೆ ಪಟೇಲ್ ಅವರನ್ನು ನೇಮಕಗೊಳಿಸಿರುವ ಬಗ್ಗೆ ಕನ್ಸರ್ವೇಟಿವ್ ಪಕ್ಷದ ಹಲವು ಸದಸ್ಯರೇ ಅಸಮಾಧಾನ ಸೂಚಿಸಿದ್ದರು.




