ಟೆಲ್ ಅವೀವ್: ಖತರ್‍ನಲ್ಲಿ ಏಜೆಂಟರನ್ನು ಬಳಸಿ ಹಮಾಸ್ ಅಧಿಕಾರಿಗಳನ್ನು ಹತ್ಯೆ ನಡೆಸುವ ದಾಳಿಯ ಯೋಜನೆಯನ್ನು ಇಸ್ರೇಲ್‍ನ ಗುಪ್ತಚರ ಸಂಸ್ಥೆ ಮೊಸ್ಸಾದ್ ವಿರೋಧಿಸಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ವಾಷಿಂಗ್ಟನ್ ಪೋಸ್ಟ್' ವರದಿ ಮಾಡಿದೆ.
ಮಂಗಳವಾರ ಖತರ್ ನತ್ತ ಇಸ್ರೇಲ್ 10 ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ಹಮಾಸ್ ನ ಹಿರಿಯ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಪ್ರತಿಪಾದಿಸಿತ್ತು.
ಖತರ್ ನಲ್ಲಿ ಹಮಾಸ್ ಅಧಿಕಾರಿಗಳನ್ನು ಹತ್ಯೆ ನಡೆಸುವುದನ್ನು ಮೊಸ್ಸಾದ್ ನಿರ್ದೇಶಕ ಡೇವಿಡ್ ಬಾರ್ನೆಯಾ ವಿರೋಧಿಸಿದ್ದು ಅಂತಹ ಕ್ರಮಗಳು ತಾನು ಮತ್ತು ತನ್ನ ಏಜೆನ್ಸಿಯು ಖತರ್ ಜನರೊಂದಿಗೆ ಬೆಳೆಸಿಕೊಂಡಿರುವ ಸಂಬಂಧದಲ್ಲಿ ಬಿರುಕು ಮೂಡಿಸಬಹುದು ಎಂದು ಹೇಳಿದ್ದರು.
ನೆಲದ ಮೇಲಿನ ಕಾರ್ಯಾಚರಣೆಗೆ ಮೊಸ್ಸಾದ್ ವಿರೋಧಿಸಿದ್ದರಿಂದ ಇಸ್ರೇಲ್ ವೈಮಾನಿಕ ಕಾರ್ಯಾಚರಣೆ ನಡೆಸಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.




