ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಜೋಕಿ ಮೊಂತೆರೊ ಅಮ್ಮೆನಡ್ಕ ಇವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಕುಮಾರಿ ತನ್ವಿ ಪ್ರಾರ್ಥನೆ ಹಾಡಿದರು. ಸತೀಶ್ ಬಿ.ಅಧ್ಯಕ್ಷತೆ ವಹಿಸಿದ್ದರು. ರಾಮಚಂದ್ರ ಮಾಸ್ತರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೀಂಜ ಪಂಚಾಯತಿ ವಿದ್ಯಾಭ್ಯಾಸ ಸಮಿತಿ ಕನ್ವೀನರ್ ರಾಮಚಂದ್ರ ಟಿ., ಮೀಂಜ-ಮಂಗಲ್ಪಾಡಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಕಾರ್ಯದರ್ಶಿ ಸತೀಶ್ ಎಲಿಯಾಣ, ಸ್ವಪ್ನ ಭಟ್ ಮೊದಲಾದವರು ಉಪಸ್ಥಿತರಿದ್ದರು. ಗ್ರಂಥಾಲಯ ಕಾರ್ಯದರ್ಶಿ ಸುರೇಶ ಬಂಗೇರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗ್ರಂಥಪಾಲಕಿ ತುಳಸಿ ವಂದಿಸಿದರು.




.jpg)
