ಮಂಜೇಶ್ವರ: ದೇಶೀಯ ಅಧ್ಯಾಪಕ ಪರಿಷತ್(ಎನ್.ಟಿ.ಯು.) ಮಂಜೇಶ್ವರ ಉಪಜಿಲ್ಲಾ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಂಗಲ್ಪಾಡಿ ಜಿ.ಎಚ್.ಎಸ್.ಎಸ್.ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶಂಕರನಾರಾಯಣ ಭಟ್ ಸಾದಂಗಾಯ ಅವರನ್ನು ಸ್ವಗೃಹದಲ್ಲಿ ಗೌರವಿಸಲಾಯಿತು.
ಎನ್.ಟಿ.ಯು. ಮಂಜೇಶ್ವರ ಉಪಜಿಲ್ಲಾ ಸಮಿತಿ ಸದಸ್ಯ ಗಣೇಶ್ ಕುಮಾರ್ ಸನ್ಮಾನಿತರ ಬಗ್ಗೆ ಮಾತನಾಡಿದರು. ಆನೆಕಲ್ಲು ಎ.ಯು.ಪಿ.ಎಸ್. ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸತ್ಯನಾರಾಯಣ ಭಟ್, ಎನ್.ಟಿ.ಯು. ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಟೀಚರ್ ಹಾಗೂ ಸನ್ಮಾನಿತರ ಧರ್ಮಪತ್ನಿ ನಿರ್ಮಲಾ ಟೀಚರ್ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲಾ ಸದಸ್ಯರಾದ ನಿವೇದಿತ, ತುಳಸಿ ಹಾಗೂ ರಾಧಾ ಮಾಧವ ಉಪಸ್ಥಿತರಿದ್ದರು. ಜಿಲ್ಲಾ ಜೊತೆಕಾರ್ಯದರ್ಶಿ ಈಶ್ವರ್ ಕಿದೂರು ಸ್ವಾಗತಿಸಿ ನಿರೂಪಿಸಿದರು. ಉಪಜಿಲ್ಲಾ ಕೋಶಾಧಿಕಾರಿ ರಘುವೀರ್ ರಾವ್ ವಂದಿಸಿದರು.




.jpg)
