ಕಾಸರಗೋಡು: ನವರಾತ್ರಿ ಮಹೋತ್ಸವ ಅಂಗವಾಗಿ 'ಟೀಮ್ ಗೇರ್-9' ಸಂಸ್ಥೆಯ ಹುಲಿವೇಷದ ಊದು ಪೂಜೆ ಅ.1ರಂದು ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯುವುದು. ಕಾರ್ಯಕ್ರಮದ ಭಿತ್ತಿಪತ್ರ ಅನಾವರಣ ಕಾರ್ಯಕ್ರಮ ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರುಗಿತು.
ಎಸ್.ವಿ.ಟಿ ಹೆಸರಿನಲ್ಲಿ 25 ವರ್ಷಕ್ಕೂ ಹೆಚ್ಚು ಕಾಲ ಹುಲಿವೇಷ ತಂಡ ನಡೆಸಿರುವ ದಾರ್ಮಿಕ ಮುಂದಾಳು ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ಹಾಗೂ ಕ್ಷೇತ್ರದ ಅರ್ಚಕರಾದ ಉಳಿಯ ಮಯೂರ ಆಸ್ರ ಬಿಡುಗಡೆಗೊಳಿಸಿದರು.
ಈ ಸಂದರ್ಭ ತಂಡದ ಪ್ರಮುಖರಾದ ಕಿಶೋರ್ ಕುಮಾರ್, ಜಿತಿನ್ ರಾಜ್, ಪುನೀತ್ ಕಾಮತ್, ಮಂಜುನಾಥ್ ರಾವ್, ಶ್ರೀದೇವ್, ವಿಷ್ಣು, ಅಕ್ಷಯ್ ದ್ವಾರಕ ಉಪಸ್ಥಿತರಿದ್ದರು.





