ಕಾಸರಗೋಡು: ಭಾರತೀಯ ಜೀವ ವಿಮಾ ನಿಗಮದ 69ನೇ ವಾರ್ಷಿಕೋತ್ಸವದ ಅಂಗವಾಗಿ ಕಾಸರಗೋಡು ಶಾಖೆ ವತಿಯಿಂದ ವಿಮಾ ಸಪ್ತಾಹವನ್ನು ವಿನೂತನವಾಗಿ ಆಚರಿಸಲಾಯಿತು. ಕಾಸರಗೋಡು ಅಪರಾಧ ವಿಭಾಗದ ಡಿವೈಎಸ್‍ಪಿ ಟಿ. ಉತ್ತಮ್‍ದಾಸ್ ಸಮಾರಂಭ ಉದ್ಘಾಟಿಸಿದರು.
ಜೀವ ವಿಮಾ ನಿಗಮದ ಕಾಸರಗೋಡು ಶಾಖಾ ಹಿರಿಯ ವ್ಯವಸ್ಥಾಪಕ ಶ್ರೀಜಿತ್ ಟಿ.ಪಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ವಿಭಾಗೀಯ ವ್ಯವಸ್ಥಾಪಕ ಮನೋಜ್ ಕೆ.ಕೆ ಸ್ವಾಗತಿಸಿದರು. ಸಹಾಯಕ ಶಾಖಾ ವ್ಯವಸ್ಥಾಪಕ ಮಥಿಯಾರಸ್ ವಂದಿಸಿದರು.
ಜೀವ ವಿಮಾ ನಿಗಮ ಕಾಸರಗೋಡು ಶಾಖೆಯ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಸದಸ್ಯರು, ವಿಮಾ ಏಜೆಂಟ್‍ಗಳು ಮತ್ತು ಪಾಲಿಸಿದಾರರು ಉಪಸ್ಥಿತರಿದ್ದರು.





