ಕಾಸರಗೋಡು: ತಂತ್ರಜ್ಞಾನ ಮುಂದುವರಿಯುತ್ತಿರುವ ಯುಗದಲ್ಲಿ, ಇದರ ಬಗೆಗಿನ ಟೀಕೆಗಳನ್ನು ಬದಿಗಿರಿಸಿ, ಕೃತಕ ಬುದ್ಧಿಮತ್ತೆಯ ಸಾಮಥ್ರ್ಯವನ್ನು ಬಳಸಿಕೊಳ್ಳುವುದು ಇಂದಿನ ಅನಿವಾರ್ಯತೆಗಳಲ್ಲಿ ಒಂದಾಗಿರುವುದಾಗಿ ಖ್ಯಾತ ಚಿಂತಕ, ಕೇರಳ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್. ಅಚ್ಯುತ ಶಂಕರ ತಿಳಿಸಿದ್ದಾರೆ.
ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಭಾಷಾಶಾಸ್ತ್ರ ವಿಭಾಗವು ಆಯೋಜಿಸಿದ್ದ ಸಾಮಥ್ರ್ಯ ನಿರ್ಮಾಣ ಕಾರ್ಯಾಗಾರ ಸರಣಿಯಲ್ಲಿ ಭಾರತೀಯ ಭಾಷೆಗಳಲ್ಲಿ ಕೃತಕ ಬುದ್ಧಿಮತ್ತೆ' ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಕೃತಕ ಬುದ್ಧಿಮತ್ತೆಯನ್ನು ಮಗುವಿನಂತೆ ಕಾಣಬೇಕು. ಐದು ವರ್ಷದ ಮಗು ಭಾಷೆಯನ್ನು ಕಲಿಯುವಂತೆಯೇ ಕೃತಕ ಬುದ್ಧಿಮತ್ತೆ ಭಾಷೆಯನ್ನು ಕಲಿಯುತ್ತದೆ.
ಇದು ಪ್ರಸಕ್ತ ಲಭ್ಯವಿರುವ ಬರವಣಿಗೆಯನ್ನು ಆಧರಿಸಿ,ಈ ಕಲಿಕೆ ನಡೆಯುತ್ತದೆ. ಭಾಷೆಯ ವಿಷಯವು ಹೆಚ್ಚು ವ್ಯಾಪಕವಾಗಿ ಲಭ್ಯವಾಗುತ್ತಿದ್ದಂತೆ, ಹೆಚ್ಚಿನ ವಿಷಯವನ್ನು ಕಲಿಯಬಹುದಾಗಿದೆ. ಯಾವುದೇ ವಿಷಯವನ್ನು ಕಲಿಯಬಹುದಾದ್ದರಿಂದ, ಭವಿಷ್ಯದಲ್ಲಿ ದೊಡ್ಡ ಬದಲಾವಣೆಗಳಿಗೆ ಇದು ಕಾರಣವಾಗಲಿದೆ ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆಯು ಮಾನವ ಸೃಜನಶೀಲತೆಯನ್ನು ಹತ್ತಿಕ್ಕುತ್ತದೆ ಎಂಬ ವಾದವನ್ನು ತಿರಸ್ಕರಿಸಿದ ಅವರು, ಕೃತಕ ಬುದ್ಧಿಮತ್ತೆಯ ಸಹಾಯದಿಂದ ಉತ್ತಮ ಸಾಹಿತ್ಯ ಕೃತಿಗಳನ್ನು ರಚಿಸಬಹುದಾಗಿದೆ. ಕೃತಕ ಬುದ್ಧಿಮತ್ತೆಯ ಬಳಕೆಯ ಜತೆಗೆ ಇದರ ದುರ್ಬಳಕೆಯನ್ನೂ ತಡೆಯಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು. ಭಾಷಾ ಶಾಸ್ತ್ರ ಮತ್ತು ತೌಲನಿಕ ಸಾಹಿತ್ಯದ ಡೀನ್ ಪೆÇ್ರ.ಜೋಸೆಫ್ ಕೊಯಿಪಲ್ಲಿ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಮುಖ್ಯಸ್ಥ ಡಾ.ಎಸ್.ತೆನ್ನರಸು, ಡಾ.ಪಿ.ಶ್ರೀಕುಮಾರ್ ಉಪಸ್ಥಿತರಿದ್ದರು.





