ಮುಳ್ಳೇರಿಯ: ಮದುವೆಯ ಬೇಡಿಕೆ ನಿರಾಕರಿಸಿದ ಗೃಹಿಣಿಯನ್ನು ಹದಿಮಧ್ಯೆ ತಡೆದು ಇರಿದು ಕೊಲೆಗೆ ಯತ್ನಿಸಿದ ಅಡೂರು ಸನಿಹದ ಮಂಡೆಕೋಲು ನಿವಾಸಿ ಹಾಗೂ ಪತಿಯ ಸ್ನೇಹಿತ ಪ್ರತಾಪ್ ಎಂಬಾತನನ್ನು ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಎರಡು ದಿವಸಗಳ ಹಿಮದೆ ಘಟನೆ ನಡೆದಿದ್ದು, ನಂತರ ಆರೋಪಿ ತಲೆಮರೆಸಿಕೊಂಡಿದ್ದು, ಅಡೂರು ಬಸ್ ನಿಲ್ದಾಣ ವಠಾರದಲ್ಲಿ ಕಂಡು ಬಂದಿದ್ದ ಈತನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿದ್ದರು.
ಅಡೂರು ಏಳುವರೆಗುರಿ ಎಂಬಲ್ಲಿ ಅವಿತುಕುಳಿತಿದ್ದ ಪ್ರತಾಪ್, 29ರ ಹರೆಯದ ಮಹಿಳೆ ಕೆಲಸ ಬಿಟ್ಟು ಮನೆಗೆ ನಡೆದುಹೋಗುವ ಮಧ್ಯೆ ಹಾದಿಮಧ್ಯೆ ತಡೆದು, ಆಕೆಯ ಕತ್ತಿಗೆ ಇರಿದಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಗೃಹಿಣಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಳು. ಮಹಿಳೆಗೆ ಈಗಾಗಲೇ ವಿವಾಹವಾಗಿದ್ದು, ಇವರ ದಾಂಪತ್ಯದಲ್ಲಿ ವಿರಸಗೊಂಡಿರುವ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಅರ್ಜಿಸಲ್ಲಿಸಿದ್ದಾರೆನ್ನಲಾಗಿದೆ.




