ಬದಿಯಡ್ಕ: ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ 2022-23ನೇ ಸಾಲಿನಲ್ಲಿ 40 ಲಕ್ಷ ರೂ. ಅನುದಾನದಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು-ಹೈಸ್ಕೂಲಿನಲ್ಲಿ ನಿರ್ಮಿಸಲಾದ ಸಾಂಸ್ಕøತಿಕ ಭವನದ ಉದ್ಘಾಟನೆ ಬುಧವಾರ ನಡೆಯಿತು.
ಕನ್ನಡ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೀವಿನಮರದ ಸಾಂಸ್ಕøತಿಕ ಭವನವನ್ನು ಉದ್ಘಾಟಿಸಿ ಮಾತನಾಡಿ, ಗಡಿ ಪ್ರದೇಶದ ಕನ್ನಡ ಭಾಷೆ, ಸಂಸ್ಕøತಿಗಳ ಬೆಳವಣಿಗೆ, ಇಲ್ಲಿಯ ಕನ್ನಡಿಗರ ಆಶೋತ್ತರಗಳ ಬಗ್ಗೆ ಕರ್ನಾಟಕ ಸರ್ಕಾರ ಸದಾ ಕಟಿಬದ್ಧವಾಗಿದೆ. ಶತಮಾನಗಳನ್ನು ಪೂರೈಸಿರುವ ಮಹಾಜನ ವಿದ್ಯಾಸಂಸ್ಥೆ ಕನ್ನಡ ಮಾಧ್ಯಮ ಶಿಕ್ಷಣ ನೀಡುವಲ್ಲಿ ಅಹರ್ನಿಶಿ ಸಲ್ಲಿಸುತ್ತಿರುವ ಜವಾಬ್ದಾರಿಗಳು ಸುತ್ಯರ್ಹವಾದುದು ಎಂದರು.
ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಶಾಲಾ ಪ್ರಬಂಧಕ ಜಯದೇವ ಖಂಡಿಗೆ, ಕನ್ನಡ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಅಖೀಲೇಶ್ ನಗುಮುಗಂ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್, ಮುಖ್ಯೋಪಾಧ್ಯಾಯರಾದ ಶಿವಪ್ರಕಾಶ್ ಎಂ.ಕೆ. ಮಾಲತಿ, ಪ್ರಾಂಶುಪಾಲ ಸುಬ್ರಹ್ಮಣ್ಯ, ಶಿಕ್ಷಕರು ಉಪಸ್ಥಿತರಿದ್ದರು.

.jpg)
