HEALTH TIPS

ಶ್ರೀಮಂತರ ಪಾಲಾಗುತ್ತಿರುವ ಲಾಭ: ಶ್ವೇತ ಭವನದ ವ್ಯಾಪಾರ ಸಲಹೆಗಾರ ನವರೊ

 ನ್ಯೂಯಾರ್ಕ್‌: ಭಾರತದ ಜನರಿಗೆ ಸಿಗಬೇಕಾದ ಹಣವು ಕೆಲವೇ ಕೆಲವು ಶ್ರೀಮಂತರ (ಬ್ರಾಹ್ಮಣರ) ಪಾಲಾಗುತ್ತಿದೆ. ಇದನ್ನು ನಿಲ್ಲಿಸಬೇಕು' ಎಂದು ಶ್ವೇತ ಭವನದ ವ್ಯಾಪಾರ ಸಲಹೆಗಾರ ಪೀಟರ್‌ ನವರೊ ಹೇಳಿದ್ದಾರೆ.

ಅಮೆರಿಕವು ಭಾರತದ ಮೇಲೆ ಶೇ 50ರಷ್ಟು ಸುಂಕ ಹೇರಿದರೂ, ಭಾರತವು ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವ ಬೆನ್ನಲ್ಲೇ ನವರೊ ಹೇಳಿಕೆ ಹೊರಬಿದ್ದಿದೆ.


'ಫಾಕ್ಸ್‌ ನ್ಯೂಸ್‌'ಗೆ ನೀಡಿರುವ ಸಂದರ್ಶನದಲ್ಲಿ ನವರೊ, 'ನೋಡಿ... ಮೋದಿ ದೊಡ್ಡ ನಾಯಕ. ಆದರೆ, ಪ್ರಪಂಚದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶವೊಂದರ ಪ್ರಧಾನಿಯಾದ ಅವರು, ಹೇಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರೊಂದಿಗೆ ಸಹಕರಿಸುತ್ತಾರೆ ಎನ್ನುವುದೇ ನನಗೆ ಅರ್ಥ ಆಗುತ್ತಿಲ್ಲ' ಎಂದು ಹೇಳಿದ್ದಾರೆ.

'ಭಾರತದಲ್ಲಿರುವ ಜನರಿಗೆ ನಾನು ಸರಳವಾಗಿ ಹೇಳುವುದಿಷ್ಟೇ, ಇಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಭಾರತದ ಜನರಿಗೆ ಸಿಗಬೇಕಾದ ಹಣದಲ್ಲಿ ಕೆಲವರಷ್ಟೇ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು' ಎಂದಿದ್ದಾರೆ.

ತೈಲ ಖರೀದಿ ಕಾರ್ಯತಂತ್ರ'ದ ಮೂಲಕ ಭಾರತವು, ರಷ್ಯಾಕ್ಕೆ ಅಕ್ರಮವಾಗಿ ಹಣಕಾಸಿನ ನೆರವು ಒದಗಿಸುತ್ತಿದೆ' ಎಂದು ನವರೊ ಇತ್ತೀಚೆಗೆ ಆರೋಪಿಸಿದ್ದರು.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries