ಮಂಜೇಶ್ವರ: ಚಿಗುರುಪಾದೆಯಲ್ಲಿ ಕಾರ್ಯವೆಸಗುತ್ತಿರುವ "ಮೀಂಜ-ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿ" ಯ ಮಹಾಸಭೆ ಭಾನುವಾರ ಚಿಗುರುಪಾದೆ ಸಿ.ಸಿ. ಕಾಂಪ್ಲೆಕ್ಸ್ ನಲ್ಲಿ ಜರಗಿತು. ಸೊಸೈಟಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ , ಮಂಜೇಶ್ವರ ವಿಭಾಗದ ಸಹಕಾರಿ ಸಹಾಯಕ ನಿಬಂಧಕ ರವೀಂದ್ರ ಅವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸೊಸೈಟಿಯ ಸದಸ್ಯರೂ, ಕರ್ನಾಟಕ ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಜಗದೀಶ್ ಶೆಟ್ಟಿ ಮಾಸ್ತರ್ ಎಲಿಯಾಣ ಅವರನ್ನು ಈ ಸಂದರ್ಭ ಗೌರವಿಸಿ ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ವಿಭಾಗದ ಎಲ್ಲ ವಿಷಯಗಳಲ್ಲೂ ಎ ಪ್ಲಸ್ ಪಡೆದ ಸದಸ್ಯರ ಮಕ್ಕಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸೊಸೈಟಿ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ, ಅಣ್ಣಪ್ಪ ಹೆಗ್ಡೆ, ಜನಾರ್ಧನ ಪೂಜಾರಿ, ಸರಸ್ವತಿ, ಸಿ.ಬಾಬು, ಸೊಸೈಟಿ ಅಭಿವೃದ್ಧಿಗೆ ಮಾರ್ಗದರ್ಶನ ನೀಡಿದರು.
ಸೊಸೈಟಿ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಬೊಳ್ಳಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ರಾಮಚಂದ್ರ ಟಿ. ಬಜೆಟ್ ಮಂಡಿಸಿ, ಕಾರ್ಯದರ್ಶಿ ಉದಯ ಸಿ.ಹೆಚ್. ವಾರ್ಷಿಕ ವರದಿ ಮಂಡಿಸಿದರು. ಸಿಬ್ಬಂದಿ ನಿವೇದಿತ ಅವರು ವಾರ್ಷಿಕ ಲೆಕ್ಕಪತ್ರ ವಾಚಿಸಿದರು. ಸೊಸೈಟಿ ನಿರ್ದೇಶಕರುಗಳಾದ ಲೋಕೇಶ್ ಚಿನಾಲ, ಮೊಹಮ್ಮದ್ ಖಾಲಿದ್, ವಿಶ್ವನಾಥ, ಸೋಮಶೇಖರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಉದಯ ಸಿ.ಹೆಚ್. ಸ್ವಾಗತಿಸಿ, ನಿರ್ದೇಶಕಿ ಚಂದ್ರಾವತಿ ವಂದಿಸಿದರು.




.jpg)
.jpg)
