HEALTH TIPS

ಅಂಚೆ ಮತಪತ್ರ ಎಣಿಕೆ ಸುಗಮಕ್ಕೆ ಕ್ರಮ: ಚುನಾವಣಾ ಆಯೋಗ

ನವದೆಹಲಿ: ಅಂಚೆ ಮತಪತ್ರಗಳ ಎಣಿಕೆ ಪೂರ್ಣಗೊಂಡ ಬಳಿಕವಷ್ಟೇ ವಿದ್ಯುನ್ಮಾನ ಮತಯಂತ್ರಗಳು/ವಿವಿಪ್ಯಾಟ್‌ನ ಕೊನೆಯ ಎರಡನೇ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ನಡೆಯಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಅಂಚೆ ಮತಪತ್ರಗಳ ಎಣಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಂಡಿರುವುದಾಗಿ ಅದು ಹೇಳಿದೆ.

ಅಂಚೆ ಮತಗಳ ಎಣಿಕೆ ಸಂಬಂಧ 2019ರಲ್ಲಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿರುವುದಾಗಿ ಆಯೋಗ ತಿಳಿಸಿದೆ.

'ಅಂಚೆ ಮತಪತ್ರಗಳ ಎಣಿಕೆಯ ಹಂತವನ್ನು ಲೆಕ್ಕಿಸದೆ ಇವಿಎಂ ಎಣಿಕೆ ಮುಂದುವರಿಯಬಹುದು' ಎಂದು 2019ರ ಆದೇಶದಲ್ಲಿ ಹೇಳಲಾಗಿತ್ತು. ಈ ಆದೇಶವನ್ನು ಹಿಂಪಡೆದಿರುವ ಆಯೋಗ, 'ಅಂಚೆ ಮತಪತ್ರಗಳ ಎಣಿಕ ಪೂರ್ಣಗೊಂಡ ಬಳವಷ್ಟೇ ಇವಿಎಂ/ವಿವಿಪ್ಯಾಟ್‌ನ ಕೊನೆಯ ಸುತ್ತಿಗೂ ಹಿಂದಿನ ಸುತ್ತಿನ ಮತ ಎಣಿಕೆ ನಡೆಸಲಾಗುವುದು' ಎಂದು ಸ್ಪಷ್ಟಪಡಿಸಿದೆ.

ಇವಿಎಂ ಎಣಿಕೆ ಪೂರ್ಣಗೊಳ್ಳುವ ಮೊದಲು ಅಂಚೆ ಮತಪತ್ರಗಳ ಎಣಿಕೆಯನ್ನು ಪೂರ್ಣಗೊಳಿಸಬೇಕು ಎಂಬುದು ವಿರೋಧ ಪಕ್ಷಗಳ ದೀರ್ಘಕಾಲದ ಬೇಡಿಕೆಯಾಗಿತ್ತು. ಅಂಗವಿಕಲರು ಮತ್ತು 85 ವರ್ಷ ದಾಟಿದ ಹಿರಿಯ ನಾಗರಿಕರ ಮತದಾನಕ್ಕಾಗಿ ಆಯೋಗ ಇತ್ತೀಚೆಗೆ ತೆಗೆದುಕೊಂಡ ಕ್ರಮಗಳಿಂದಾಗಿ ಅಂಚೆ ಮತಪತ್ರಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ದಾಖಲಾಗಿದೆ. ಹೀಗಾಗಿ ಆಯೋಗ ಈ ಕುರಿತು ನಿರ್ಧಾರ ತೆಗೆದುಕೊಂಡಿದೆ.

ಆಯೋಗದ ಈ ಹೊಸ ನಿರ್ಧಾರವು ಬಿಹಾರ ವಿಧಾನಸಭಾ ಚುನಾವಣೆಯಿಂದ ಜಾರಿಗೆ ಬರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries