ಕಾಸರಗೋಡು: ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಐಸಿಎಆರ್-ಸಿಪಿಸಿಆಐ ಮತ್ತು ಕೇರಳ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಕಾಸರಗೋಡು ಜಿಲ್ಲೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು (ಸಿ.ಆರ್.ಪಿ)ಹಾಗೂ ಕೃಷಿ ಸಖಿಗಳಿಗಾಗಿ ನೈಸರ್ಗಿಕ ಕೃಷಿಯ ಕುರಿತು ತರಬೇತಿ ಕಾರ್ಯಕ್ರಮ ಸಿಪಿಸಿಆರ್‍ಐ ಕೇಂದ್ರದ ಡಿ.ಜೆ ಸಭಾಂಗಣದಲ್ಲಿ ಆರಂಭಗೊಂಡಿತು.
ಐಸಿಎಆರ್ ಸಿಪಿಸಿಆರ್‍ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೈಸರ್ಗಿಕ ಕೃಷಿಯ ಮುಖ್ಯ ಕಾರ್ಯಸೂಚಿ ಮಣ್ಣಿನ ಆರೋಗ್ಯ ನಿರ್ವಹಣೆಯಾಗಬೇಕು. ಮಣ್ಣಿನ ಸಂರಕ್ಷಣೆಯಿಂದ ಮಾತ್ರ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಾಚರಿಸಬೇಕು ಎಂದು ತಿಳಿಸಿದ ಅವರು, ನೈಸರ್ಗಿಕ ಸಾವಯವ ವಸ್ತುಗಳ ಮರುಬಳಕೆಯ ಮೂಲಕ ನಮ್ಮ ಮಣ್ಣನ್ನು ರಕ್ಷಿಸಲು ನೈಸರ್ಗಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ವಿವರಿಸಿದರು. ಕಾಸರಗೋಡು ಎಟಿಎಂಎ ಯೋಜನಾ ನಿರ್ದೇಶಕ ಆನಂದ ಕೆ. ಕಾಸರಗೋಡು ಎಟಿಎಂಎ ಉಪ ಯೋಜನಾ ನಿರ್ದೇಶಕ ಸುರೇಶ್ ಎಂ.ಎಸ್, ಐಸಿಎಆರ್ ಸಿಪಿಸಿಆಐ ಪ್ರಧಾನ ವಿಜ್ಞಾನಿಗಳಾದ ಡಾ. ಪಿ. ಸುಬ್ರಹ್ಮಣ್ಯಂ, ಡಾ. ಕೆ.ಪೊನ್ನುಸ್ವಾಮಿ ಉಪಸ್ಥಿತರಿದ್ದರು.
ಕಾಸರಗೋಡು ಐಸಿಎಆರ್-ಕೆವಿಕೆಯ ಎಸ್‍ಎಂಎಸ್ (ತೋಟಗಾರಿಕೆ) ಡಾ. ಬೆಂಜಮಿನ್ ಮ್ಯಾಥ್ಯೂ ಸ್ವಾಗತಿಸಿದರು. ಐಸಿಎಆರ್ ಕೆವಿಕೆಯ ಎಸ್‍ಎಂಎಸ್‍ನ ಡಾ. ಸರಿತಾ ಹೆಗ್ಡೆ ವಂದಿಸಿದರು.
ಸಂಪನ್ಮೂಲ ತಜ್ಞರಾದ ಡಾ.ಜಯಶೇಖರ್, ಡಾ.ಪ್ರತಿಭಾ ಪಿ.ಎಸ್., ಡಾ.ಸುರೇಖಾ, ಡಾ.ಸರಿತಾ ಹೆಗಡೆ, ಡಾ.ಬೆಂಜಮಿನ್ ಮ್ಯಾಥ್ಯೂ, ಜಯಶ್ರೀ ಎಂ.ಪಿ., ದಿನೇಶ್‍ಕುಮಾರ್ ಯಾದವ್ ಹಾಗೂ ಕೃಷಿ ತಜ್ಞರಾದ ಶಿವಪ್ರಸಾದ್, ಸುಬ್ರಹ್ಮಣ್ಯ ಪ್ರಸಾದ್ ಅವರು ನೈಸರ್ಗಿಕ ಕೃಷಿಯ ವಿವಿಧ ಅಂಶಗಳ ಕುರಿತು ತರಗತಿ ನಡೆಸಿದರು. ಕಾಸರಗೋಡು ಐಸಿಎಆರ್ ಕೆವಿಕೆಯ ಇತರ ವಿಷಯ ತಜ್ಞರಾದ ಡಾ. ನಿಲೋಫರ್ ಇಲ್ಯಾಸ್ ಕುಟ್ಟಿ, ಡಾ. ರಾಮಾವತ್ ಪಾಂಡು ಮತ್ತು ಕಿರಣ್ಮಯಿ ಉಪಸ್ಥಿತರಿದ್ದರು.





