ಚುರಾಚಾಂದಪುರ/ಇಂಫಾಲ್ (PTI): ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರವೇ ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಮಂಗಳವಾರ ಕುಕಿ-ಜೊ ಶಾಸಕರ ಜತೆಗೆ ಮಾತುಕತೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುರಾಚಾಂದಪುರ ಹಾಗೂ ಫರ್ಜಾಲ್ ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರಗಳ ಶಾಸಕರಾಗಿರುವ ನಾಗುರ್ಸಂಗಲೂರ್ ಸನಾತೆ, ವುಂಗ್‌ಜಾಗಿನ್ ವಾಲ್ಟೆ, ಎಲ್.ಹಾವೊಪಿಕ್, ಎಲ್.ಎಂ. ಖೌಟೆ, ಪಾವೊಲಿಯೆನ್‌ಲಾಲ್ ಹಾವೊಪಿಕ್ ಹಾಗೂ ಚುರಾಚಾಂದಪುರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ತಂಗ್ಲಾಮ್ ಹಾವೊಕಿಪ್ ಅವರೊಂದಿಗೆ ಉಪ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಅಜಯ್ ಈ ಮಾತುಕತೆ ನಡೆಸಿದ್ದಾರೆ.
ಮೋದಿ ಅವರ ಭೇಟಿಗೆ ಸಂಬಂಧಿಸಿದ ಸಿದ್ಧತೆಗಳ ಕುರಿತಂತೆ ಚರ್ಚೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.




