ಕುಂಬಳೆ: ಶರನ್ನವರಾತ್ರಿ ಪೂಜೆ ಪ್ರಯುಕ್ತ ಕುಂಬಳೆ ಸಮೀಪದ ಕಂಚಿಕಟ್ಟೆ ಶಾಂತದುರ್ಗಾ ದೇವಸ್ಥಾನದಲ್ಲಿ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದವರಿಂದ ಭಾನುವಾರ ವಾಲಿ ಮೋಕ್ಷ ಯಕ್ಷಗಾನ ತಾಳಮದ್ದಳೆ ಜರಗಿತು. ಭಾಗವತರಾಗಿ ತಲ್ಪಣಾಜೆ ಶಿವಶಂಕರ ಭಟ್, ಶ್ರೀಹರಿ ಹೊಳ್ಳ ಮಧೂರು, ಹಿಮ್ಮೇಳದಲ್ಲಿ ಕೃಷ್ಣಮೂರ್ತಿ ಪಾಡಿ, ಮುರಳಿ ಶೇಡಿಕಾವು, ಪಾತ್ರವರ್ಗದಲ್ಲಿ ಉದಯಶಂಕರ ಭಟ್ ಮಜಲು, ಅಶೋಕ ಶೇಡಿಕಾವು, ಸದಾಶಿವ ಮುಳಿಯಡ್ಕ, ಪ್ರತಾಪ ಕುಂಬಳೆ, ದುರ್ಗಾಶಂಕರ ಅಡಿಗ ಶೇಡಿಕಾವು, ಗುರುಮೂರ್ತಿ ನಾಯ್ಕಾಪು ಸಹಕರಿಸಿದರು.




.jpg)
