ಬದಿಯಡ್ಕ: ಅಗ್ನಿ ಫ್ರೆಂಡ್ಸ್ ಬದಿಯಡ್ಕ ಇದರ ಕಾರ್ಯಕರ್ತರು ಕರಿಂಬಿಲದ ಜಯಂತಿ ಎಂಬವರ ಮನೆಯ ದುರಸ್ತಿಕಾರ್ಯಗಳಿಗೆ ಸಹಕರಿಸಿ ಮಾದರಿಯಾದರು.
12 ವರ್ಷಗಳ ಹಿಂದೆ ಅವರ ಪತಿ ತೀರಿಹೋಗಿದ್ದು, ಪುತ್ರ ಕೂಲಿ ಕೆಲಸವನ್ನು ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಇವರ ಮನೆ ಗಾಳಿಮಳೆಗೆ ಹಾನಿಯಾಗಿತ್ತು. ಈ ನಿಟ್ಟಿನಲ್ಲಿ ಇವರ ಮನೆ ದುರಸ್ತಿಗೆ ಸದಾ ಸಮಾಜಮುಖೀಯ ಚಿಂತನೆಯಲ್ಲಿ ತೊಡಗಿಸಿಕೊಂಡಿರುವ ಬದಿಯಡ್ಕದ ಅಗ್ನಿ ಫ್ರೆಂಡ್ಸ್‍ನ ಕಾರ್ಯಕರ್ತರು ಅವರೊಂದಿಗೆ ಜೊತೆಗೂಡಿದರು. ಪ್ರಕೃತಿದುರಂತ, ಅಸೌಖ್ಯ, ಪರಿಸರ ಶುಚಿತ್ವ, ರುದ್ರಭೂಮಿ ಶುಚಿತ್ವ, ಮನೆ ದುರಸ್ಥಿ ಮೊದಲಾದ ಅನೇಕ ಚಟುವಟಿಕೆಗಳಲ್ಲೂ ಇವರು ನಾಡಿನ ಜನರೊಂದಿಗೆ ಕೈಜೋಡಿಸಿರುವುದು ಗಮನಾರ್ಹ. ಭಾನುವಾರ ನಡೆದ ಶ್ರಮದಾನದಲ್ಲಿ ಅಗ್ನಿ ಫ್ರೆಂಡ್ಸ್ ಬದಿಯಡ್ಕದ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ನಿಕಟಪೂರ್ವ ಬ್ಲಾಕ್ ಪಂಚಾಯಿತಿ ಸದಸ್ಯ ಅವಿನಾಶ್ ರೈ ನೇತೃತ್ವ ವಹಿಸಿದ್ದರು.




.jpg)
