ಕಾಸರಗೋಡು: ದೈವವನ್ನು ಆರಾಧಿಸುವಂತೆ ದೈವನರ್ತನ ಕಲಾವಿದರನ್ನೂ ಆದರಿಸಿ, ಗೌರವಿಸುವ ಪರಿಪಾಠ ಸಮಾಜದಲ್ಲಿ ನಡೆದುಬರಬೇಕಾಗಿದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸವಾಮೀಜಿ ತಿಳಿಸಿದ್ದಾರೆ. ಅವರು ತಮ್ಮ ಐದನೇ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭ ಶ್ರೀಮಠದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ದೈವನರ್ತನ ಕಲಾವಿದ ರಾಜನ್ ಪಣಿಕ್ಕರ್ ಅವರನ್ನು ಅನುಗ್ರಹಿಸಿ ಆಶೀರ್ವಚನ ನೀಡಿದರು. ದೈವನರ್ತಕರು ಸಂಸ್ಕøತಿಯಯನ್ನು ತಲೆಮಾರಿಗೆ ಕೊಂಡೊಯ್ಯುವ ಧಾರ್ಮಿಕ ಪ್ರತಿನಿಧಿಗಳಾಗಿದ್ದು, ದೈವನರ್ತಕರನ್ನು ಗೌರವಿಸುವ ಮೂಲಕ ಕಲೆಗೂ ಗೌರವ ಪ್ರಾಪ್ತಿಯಾಘುತ್ತದೆ ಎಂದು ತಿಳಿಸಿದರು.
ರಾಜ್ಯ ಪರಿಸರ ಮಂಡಳಿ ನಿರ್ದೇಶಕ ಮಂಡಳಿ ಕಾರ್ಯದರ್ಶಿ, ಹೆಚ್ಚುವರಿ ಎಸ್.ಪಿ ಡಾ. ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಎಡನೀರು ಮಠ ಸಂಸ್ಕøತಿ, ಪರಂಪರೆಯನ್ನು ಪೋಷಿಸಿಕೊಂಡು ಬರುವಲ್ಲಿ ಪಾತ್ರ ವಹಿಸುತ್ತಿದೆ. ಯಕ್ಷಗಾನಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ರೀತಿಯಲ್ಲೇ ಕೇರಳದ ಇನ್ನೊಂದು ವಿಶಿಷ್ಟ ಕಲೆ ಕಥಕ್ಕಳಿಗೂ ಮಹತ್ವ ಕಲ್ಪಿಸಿ ಶ್ರೀಮಠದಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಕಲೆಗಳ ಆರಾಧನೆಗೆ ಹೆಚ್ಚಿನ ಪ್ರೋತ್ಸಾಹವನ್ನು ಶ್ರೀಗಳು ನೀಡುತ್ತಾ ಬಂದಿರುವುದಾಘಿ ತಿಳಿಸಿದರು.
ಉಮೇಶ್ ನರಿಕಡಪ್ಪು ಸ್ವಾಗತಿಸಿದರು. ಸೂರ್ಯನಾರಾಐಣ ಭಟ್ ಎಡನೀರು ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಎಡನೀರು ವಂದಿಸಿದರು.





