HEALTH TIPS

ಮಂಜೇಶ್ವರ: ಉಪಯೋಗಕ್ಕೆ ದಕ್ಕದ ಹೊಲಿಗೆ ಯಂತ್ರಗಳು: ಕಳಪೆ ಗುಣಮಟ್ಟದಿಂದ ಲಕ್ಷಾಂತರ ರೂ.ಗಳ ವ್ಯರ್ಥ

ಮಂಜೇಶ್ವರ: 2020-21ರ ಆರ್ಥಿಕ ವರ್ಷದಲ್ಲಿ  ಮಂಜೇಶ್ವರ ಗ್ರಾಮ ಪಂಚಾಯತಿ ಮೀಸಲಿಟ್ಟ 4 ಲಕ್ಷ ರೂ. ಹಾಗೂ ಐಸಿಡಿಎಸ್ ವತಿಯಿಂದ ಮಂಜೂರಾದ 1 ಲಕ್ಷ ರೂ.ಗಳೊಂದಿಗೆ ಮಹಿಳಾ ಮೀಸಲಾತಿ ನಿಧಿಯಿಂದ  ಸ್ಟ ಉದ್ಯೋಗ ಹೊಲಿಗೆ ಘಟಕ ಸ್ಥಾಪಣೆಗೆ ಜನಪ್ರಿಯ ಕಂಪನಿಯೊಂದರ ಹೆಸರಲ್ಲಿ ಕಳಪೆ ಗುಣಮಟ್ಟದ ಹೊಲಿಗೆ ಯಂತ್ರಗಳನ್ನು ಖರೀದಿಸಿ ಅವುಗಳು ಉಪಯೋಗಕ್ಕೆ ಬಾರದೆ ಐಸಿಡಿಎಸ್ ಕಚೇರಿಯ ಕೊಠಡಿಯೊಳಗೆ ಮೂಲೆ ಪಾಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಜನಪ್ರಿಯ ಕಂಪನಿಯೊಂದರ ಹೆಸರಿನಲ್ಲಿ ನಕಲಿ ಮಾಲುಗಳನ್ನು ಖರೀದಿಸಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.


2020 ರಲ್ಲಿ ಅಧಿಕಾರಕ್ಕೇರಿದ ನೂತನ ಆಡಳಿತ ಸಮಿತಿ ಕೂಡಾ ಈ ವಿಷಯವನ್ನು ಗೌಪ್ಯವಾಗಿಟ್ಟು ಮೌನ ಪಾಲಿಸಿರುವುದು ಕೂಡಾ ಹಲವು ರೀತಿಯ ಸಂಶಯಗಳನ್ನು ಹುಟ್ಟು ಹಾಕಿದೆ. ಮೂಲೆಪಾಲಾಗಿರುವ ಕಳಪೆ ಗುಣಮಟ್ಟದ ಹೊಲಿಗೆ ಯಂತ್ರಗಳ ಬಗ್ಗೆ ಯಾವುದೇ ಚಕಾರವನ್ನು ಎತ್ತದ  ಗ್ರಾಮ ಪಂಚಾಯತಿ ಹಾಗೂ ಐಸಿಡಿಎಸ್ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಅಧಿಕಾರಿಗಳ ಈ ನಡವಳಿಕೆ ವಿರುದ್ಧ ಗ್ರಾಮಸ್ಥರು ಛೀ ಮಾರಿ ಹಾಕಲು ಆರಂಭಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಂಜೇಶ್ವರ  ಐ.ಸಿ.ಡಿ.ಎಸ್. ಉಪಾಧ್ಯಕ್ಷೆ ರೋಹಿಣಿ ಅವರು ಮಾತನಾಡಿ, ಕಳಪೆ ಗುಣಮಟ್ಟದ ಹೊಲಿಗೆ ಯಂತ್ರಗಳು ನಮಗೆ ಉಪಯೋಗಕ್ಕೆ ಬಂದಿಲ್ಲ. ಟೈಲರಿಂಗ್ ಉದ್ಯಮ ಆರಂಭಿಸಲು ತಾನು ನಾಲ್ಕು  ಲಕ್ಷ ರೂ. ಯೋಜನೆ ತಯಾರಿಸಿ ಕೊಟ್ಟಿದ್ದೆ. ಅದರಲ್ಲಿ ಉತ್ತಮ ಗುಣಮಟ್ಟದ 10 ಹೈ ಸ್ಪೀಡ್ ಹೊಲಿಗೆ ಯಂತ್ರಕ್ಕೆ ಬೇಡಿಕೆ ಇಡಲಾಗಿತ್ತು. ಅದರೆ ನಮಗೆ ಕಳಪೆ ಗುಣಮಟ್ಟದ 50 ಹೊಲಿಗೆ ಯಂತ್ರಗಳನ್ನು ತಂದು ಕೊಟ್ಟಿದ್ದಾರೆ. ಇದು ಯಾವುದೂ ಕೆಲಸಕ್ಕೆ ಬಾರದ ಯಂತ್ರಗಳಾಗಿದೆ. ನಾವು ದುರಸ್ಥಿ  ಮಾಡಿದರೂ ಅದನ್ನು ಉಪಯೋಗಿಸಲು ಸಾಧ್ಯವಾಗಿಲ್ಲ. 5 ಲಕ್ಷ ರೂ. ಮೊತ್ತ ಕೂಡಾ ವ್ಯರ್ಥವಾಗಿದೆ ಎಂದು ಹೇಳಿದರು. ಈ ಬಗ್ಗೆ ಹಲವಾರು ಸಲ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಇಲ್ಲವೆನ್ನಲಾಗಿದೆ.

ಸಾಮಾಜಿಕ ಕಾರ್ಯಕರ್ತ ಜಬ್ಬಾರ್ ಅವರು ಪ್ರತಿಕ್ರಿಯಿಸಿ ಮಾತನಾಡಿ ನಮ್ಮ ಗಮನಕ್ಕೆ ಈ ವಿಷಯ ಬಂದಾಗ ನಾವು ಪಂಚಾಯತಿಯಿಂದ ಮಾಹಿತಿ ಪಡೆದಾಗ ಸಾರ್ವಜನಿಕರ ತೆರಿಗೆ ಹಣ ಪೋಲಾಗಿರುವುದಕ್ಕೆ ಇದೊಂದು ಮೂಕ ಸಾಕ್ಷಿಯಾಗಿದೆ. ಈ ಬಗ್ಗೆ ವಿಜಿಲೆನ್ಸ್ ತನಿಖೆ ನಡೆಯಬೇಕಾಗಿದೆ ಎಂದು ಹೇಳಿದರು.

ಲಕ್ಷಾಂತರ ರೂ. ಗುಳುಂ ಮಾಡಲು ಈ ರೀತಿಯ ಕೃತ್ಯವೆಸೆಗಿರುವ ಬಗ್ಗೆ ಕೂಡಾ ಸಾರ್ವಜನಿಕರು ಆರೋಪ ಮಾಡುತಿದ್ದಾರೆ. ಯೋಜನೆಯ ಉದ್ದೇಶವಾದ ಮಹಿಳಾ ಉದ್ಯೋಗ ಕಲ್ಪನೆಯಲ್ಲಿಯೇ ವಿಫಲವಾಗಿದೆ. ಯಂತ್ರಗಳ ಬಳಕೆ ಇಲ್ಲದೆ ಸ್ಥಳೀಯ ಮಹಿಳೆಯರು ಯಾವುದೇ ತರಬೇತಿ ಅಥವಾ ಉದ್ಯೋಗವನ್ನು ಪಡೆಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಇದೀಗ ಅಧಿಕಾರದಲ್ಲಿರುವ  ಐಸಿಡಿಎಸ್ ಅಧಿಕಾರಿಗಳೂ ನಿರ್ಲಕ್ಷ್ಯ ಮಾಡಿರುವುದು ಸಾರ್ವಜನಿಕ ವಲಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು,  ಜಿಲ್ಲೆಯ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿ ಸಂಪೂರ್ಣ ಲೆಕ್ಕಪತ್ರಗಳ ಪರಿಶೀಲನೆ ಮಾಡಿಸಬೇಕು. ಇದಕ್ಕೆ ಹೊಣೆಗಾರರಾಗಿರುವ ಗ್ರಾಮ ಪಂಚಾಯತಿ ಹಾಗೂ ಐ.ಸಿ.ಡಿ.ಎಸ್. ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ಆಡಳಿತ ಸಮಿತಿಗೆ ಇದೊಂದು ಕಪ್ಪು ಚುಕ್ಕೆಯಾಗಲಿದ್ದು, ಮಹಿಳಾ ಸಬಲಿಕರಣಕ್ಕಾಗಿ ಮೀಸಲಾದ ಯೋಜನೆಯು ಅದಿಕೃತರ ನಿರ್ಲಕ್ಷ್ಯದ ಕಾರಣದಿಂದ ಗ್ರಾಮಸ್ಥರ ನಿರೀಕ್ಷೆಗಳನ್ನು ಭಂಗಪಡಿಸಿದೆ. ಇಂತಹ ಘಟನಗಳು ಸಾರ್ವಜನಿಕರಿಗೆ ಆಡಳಿತದ ಮೇಲೆ ನಂಬಿಕೆಗೆ ಧಕ್ಕೆಯಾಗುವಂತಾಗಿದೆ. ತಕ್ಷಣದ ಸೂಕ್ತ ಕ್ರಮಗಳಿಂದ ಮಾತ್ರ ಜನರ ನಂಬಿಕೆಯನ್ನು ಮರಳಿ ಗೆಲ್ಲಲು ಸಾಧ್ಯ ಎನ್ನಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries