ಬದಿಯಡ್ಕ: ಕುಂಟಾರು ರವೀಶ ತಂತ್ರಿಗಳ ಸಂಸ್ಕಾರದ ಮತ್ತು ತಾಂತ್ರಿಕ ವಿಧಿವಿಧಾನ, ನಡತೆ, ಬ್ರಾಹ್ಮಣ್ಯದ ಬಗ್ಗೆ ಮತ್ತು ಮಂಜುನಾಥ ಉಡುಪರ ಬಗ್ಗೆ ಅವಹೇಳನಕಾರಿಯಾಗಿ ಮತ್ತು ಮಾನಹಾನಿಕಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಮಾತಾಡಿದ ತಮ್ಮಣ್ಣ ಶೆಟ್ಟಿ ಎಂಬವರ ಮಾತುಗಳನ್ನು ಶಿವಳ್ಳಿ ಬ್ರಾಹ್ಮಣ ಸಭಾ ಏತಡ್ಕ ವಲಯ ಸಮಿತಿ ಖಂಡಿಸಿದೆ.
ಸಮಾಜವು ಶ್ರೇಷ್ಠ ವ್ಯಕ್ತಿತ್ವಗಳನ್ನು ಅವಹೇಳನಗೈಯ್ಯುವುದನ್ನು ಸಹಿಸದು. ಗಖಡ ಖಂಡಿತವಾಗಿ ಖಂಡಿಸುತ್ತದೆ. ರವೀಶ ತಂತ್ರಿಗಳು ಮುಂದೆ ನಡೆಸುವ ಹೋರಾಟಕ್ಕೆ ಸಮಾಜವು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಏತಡ್ಕದಲ್ಲಿ ನಡೆಸಿದ ಶಿವಳ್ಳಿ ಬ್ರಾಹ್ಮಣ ಸಭೆ ತಿಳಿಸಿದೆ. ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೇತನರಾಮ ನೂರಿತ್ತಾಯ, ಡಾ.ಸತೀಶ ಪುಣಿಚಿತ್ತಾಯ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.




.jpg)
