ಕಾಸರಗೋಡು: ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಸುರಕ್ಷಾ ಪಡೆ(ಎಸ್.ಪಿ.ಜಿ)ಯ ಯೋಧ, ಕಾಸರಗೋಡು ಚಿತ್ತಾರಿಕಲ್ ನಿವಾಸಿ ಶಿನ್ಸ್ ಮೋನ್ ತಲಚ್ಚಿರ(45)ರಾಜಸ್ಥಾನದಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇವರು ಚಿತ್ತಾರಿಕ್ಕಲ್ ಮಂಡಪಂ ತಲಚ್ಚಿರ ನಿವಾಸಿ ಮಣಿಕುಟ್ಟಿ-ಗ್ರೇಸಿ ದಂಪತಿ ಪುತ್ರನಾಗಿದ್ದು, ಕೆಲಸ ಬಿಟ್ಟು ವಾಸ ಸ್ಥಳಕ್ಕೆ ವಾಪಸಾಗುವ ಮಧ್ಯೆ ವಾಹನ ಅಪಘಾತದಿಂದ ಸಾವು ಸಂಭವಿಸಿರುವುದಾಗಿ ಮಾಹಿತಿ ಲಭಿಸಿದೆ. ಕಳೆದ 23ವರ್ಷಗಳಿಂದ ಎಸ್.ಪಿ.ಜಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಕಳೆದ ಕೆಲವು ವರ್ಷಗಳಿಂದ ಮಣಕ್ಕಡವು ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮೃತದೇಹ ಶುಕ್ರವಾರ ಊರಿಗೆ ತಲುಪಲಿರುವುದಾಗಿ ಕುಟುಂಬ ಮೂಲಗಳು ತಿಳಿಸಿದೆ.




