ಕಾಸರಗೋಡು: ವಿಶ್ವಕರ್ಮ ದಿನಾಚರಣೆಯ ಅಂಗವಾಗಿ ಬಿಎಂಎಸ್ ಕಾರಡ್ಕ ಪಂಚಾಯತು ಕಮಿಟಿಯ ಆಶ್ರಯದಲ್ಲಿ ಕೇರಳ ಸರ್ಕಾರದ ಜನವಿರೋಧಿ ಧೋರಣೆ ಖಂಡಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.
ಬಿಎಂಎಸ್ ಕಾಸರಗೋಡು ಜಿಲ್ಲಾ ಕಾರ್ಯಕಾರೀ ಸಮಿತಿ ಸದಸ್ಯ ಎಂ.ಕೆ.ರಾಘವನ್ ಸಮಾರಂಭ ಉದ್ಘಾಟಿಸಿದರು. ಜಾಥಾ ಮುಖಂಡ ಅಪೆÇ್ಪೀಜಿ ಅವತಿಗೆ ಬಿಎಂಎಸ್ ದ್ವಜ ಹಸ್ತಾಂತರಿಸುವ ಮೂಲಕ ಕಾಲ್ನಡೆ ಜಾಥಾಕ್ಕೆ ಚಾಲನೆ ನೀಡಿದರು. ವಲಯ ಸಮಿತಿ ಅಧ್ಯಕ್ಷ ಆನಂದ ಸಿ.ಎಚ್.ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪದಾಧಿಕಾರಿಗಳಾದ ಲೀಲಾ ಕೃಷ್ಣನ್, ಗೀತಾ ಬಾಲಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು. ವಲಯ ಕಾರ್ಯದರ್ಶಿ ಸದಾಶಿವ ಸ್ವಾಗತಿಸಿದರು. ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಜನವಿರೋಧಿ ನೀತಿ ಬಗ್ಗೆ ಪ್ರಚಾರ ನಡೆಸಲಾಯಿತು.





