ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಮುದೆ ನಿವಾಸಿ, ಗಲ್ಫ್ ಉದ್ಯೋಗಿ ರಫೀಕ್ ಎಂಬವರ ಮನೆಗೆ ನುಗ್ಗಿದ ಕಳ್ಳರು 30ಸಾವಿರ ರೂ. ನಗದು ಹಾಗೂ ಬ್ಯಾಂಕ್‍ನ ಚೆಕ್‍ಬುಕ್‍ನ ಹಾಳೆಯನ್ನು ಕಳವುಗೈದಿರುವ ಬಗ್ಗೆಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ರಫೀಕ್ ಅವರ ಪತ್ನಿ ಶಮ್ನಾ ಅವರ ದೂರಿನ ಮೇರೆಗೆ ಈ ಕೇಸು.
ಶಮ್ನಾ ಹಾಗೂ ಮನೆಯವರು ಸೆ. 8ರಂದು ಪೆರ್ಮುದೆಯ ಮಸೀದಿಗೆ ತೆರಳಿದ್ದು, ಅಂದು ರಾತ್ರಿ ಅಲ್ಲಿಂದ ತನ್ನ ಸಹೋದರಿ ಮನೆಗೆ ತೆರಳಿದ್ದರು. ಮರುದಿನ ವಾಪಸಾದಾಗ ಮನೆ ಎದುರಿನ ಬಾಗಿಲು ಒಡೆದು ಕೃತ್ಯವೆಸಗಿರುವುದು ಬೆಳಕಿಗೆ ಬಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.




