ಕಾಸರಗೋಡು: ಚೆರ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಹಂತದಲ್ಲಿರುವ ರಸ್ತೆ ಮೇಲ್ಸೇತುವೆಯಿಂದ ಬಿದ್ದು, ಅಸ್ಸಾಂ ಲಾಲ್‍ಪೇಟ ನಿವಾಸಿ ರಬೀಬುಲ್‍ಹಕ್(27)ಮೃತಪಟ್ಟಿದ್ದಾರೆ. ಷಟ್ಪಥ ಕಾಮಗಾರರಿ ನಡೆಯುತ್ತಿರುವ ಮಧ್ಯೆ ಮಂಗಳವಾರ ಸಂಜೆಮೇಲ್ಸೇತುವೆಗಾಘಿ ಕಬ್ಬಿಣದ ಸಲಾಕೆ ಕಟ್ಟುವ ಮಧ್ಯೆ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದ ಇವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ರಬೀಬುಲ್‍ಹಕ್ ಐದು ತಿಂಗಳ ಹಿಂದೆಯಷ್ಟೆ ಹೆದ್ದಾರಿ ಕಾಮಗಾರಿ ನಡೆಯುವ ಚೆರ್ಕಳಕ್ಕೆ ಆಗಮಿಸಿದ್ದರು.




