ಪೆರ್ಲ: ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ, ಪೆರ್ಲ ಘಟಕದ' ದತ್ತಿ ನಿಧಿ 'ಯೋಜನೆಯನ್ವಯ ಬಜಕೂಡ್ಲು ನಡುಬೈಲು ದಿ. ಪುರುಷೋತ್ತಮ ಪೂಜಾರಿಯ ಅವರ ಪುತ್ರಿ ಕು. ದಿಯಾ ಅವರಿಗೆ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ನೀಡುವ ಕಾರ್ಯಕ್ರಮ ಭಾನುವಾರ ಜರುಗಿತು.
ನಡುಬೈಲಿನ ದಿ. ಪುರುಷೋತ್ತಮ ಅವರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಧನಸಹಾಯದ ಮೊತ್ತ ವಿತರಿಸಲಾಯಿತು. ದತ್ತಿ ನಿಧಿ ಪ್ರಾಯೋಜಕರಾದ ಬೇಕರಿ ಉದ್ಯಮಿ ದಿನೇಶ ಜಿ. ಕೆ. ಆರ್ಥಿಕ ಸಹಾಯವನ್ನು ಹಸ್ತಾಂತರಿಸಿದರು. ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಬಿ. ಪಿ. ಶೇಣಿ, ಕಾರ್ಯದರ್ಶಿ ಅಖಿಲೇಶ್ ಕಾನ, ಬೆದ್ರಂಪಳ್ಳ ಪ್ರಾದೇಶಿಕ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಮಾಸ್ಟರ್ ನಡುಬೈಲು, ವಿನೀತ್ ರಾಜ್ ಅಮೆಕ್ಕಳ, ದಿ. ಪುರುಷೋತ್ತಮ ಅವರ ಪತ್ನಿ ಚಂದ್ರಾವತಿ ಉಪಸ್ಥಿತರಿದ್ದರು.
ಮೃತರ ಇನ್ನೋರ್ವ ಪುತ್ರಿ ದೀಕ್ಷಿತಾ ಅವರ ಶಿಕ್ಷಣಕ್ಕೆ ನಿವೃತ್ತ ಶಿಕ್ಷಕ ಉಮೇಶ್ ಕೆ. ಪೆರ್ಲ ಪ್ರಾಯೋಜಕತ್ವ ನೀಡಿದ್ದು, ಪೆರ್ಲದಲ್ಲಿ ಇತ್ತೀಚೆಗೆ ನಡೆದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮೊತ್ತವನ್ನು ಉಮೇಶ ಕೆ. ಪೆರ್ಲ ಫಲಾನುಭವಿಗಳಿಗೆ ಹಸ್ತಾಂತರಿಸಿದ್ದರು.





