ಕಾಸರಗೋಡು: ಆಧುನಿಕ ಮಾಧ್ಯಮ ಚಟುವಟಿಕೆ ಹೆಚ್ಚು ಸವಾಲುಗಳಿಂದ ಕೂಡಿದ್ದು, ಪತ್ರಕರ್ತ ಅತಿಯಾದ ಚಾಕಚಕ್ಯತೆ ಮತ್ತು ಪರಾಮರ್ಶೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂಬುದಾಗಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದ್ದಾರೆ. ಅವರು ಚೆರ್ವತ್ತೂರಿನ ಪ್ರೆಸ್ ಫಾರಂ ಆಯೋಜಿಸಿದ್ದ ಪತ್ರಕರ್ತ ಪ್ರಕಾಶನ್ ಕುಟ್ಟಮತ್ ಸಂಸ್ಮರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಾಮಾಣಿಕ ಸುದ್ದಿಗಳನ್ನು ವರದಿ ಮಾಡುವಾಗ ಪತ್ರಕರ್ತನಾದವನು ಹೆಚ್ಚು ಜಾಗರೂಕತೆ ಪಾಲಿಸಬೇಕಾದ ಕಾಲಘಟ್ಟವಿದು. ಸರಿ-ತಪ್ಪುಗಳನ್ನು ಖಚಿತಪಡಿಸಿಕೊಂಡು ವರದಿ ಮಾಡಿದಾಗ ಆ ಸುದ್ದಿಗೂ ಹೆಚ್ಚು ಮಹತ್ವ ಲಭಿಸುತ್ತದೆ. ಅಭಿವೃದ್ಧಿಪರ ಪತ್ರಿಕೋದ್ಯಮಕ್ಕೆ ಆದ್ಯತೆ ನೀಡಿದಾಗ ಸಮಾಜದಲ್ಲಿ ಬದಲಾವಣೆ ಕಂಡುಕೊಳ್ಳಲು ಸಾಧ್ಯವಾಗಲಿದೆ. ಇದರಿಂದ ಜನಪ್ರತಿನಿಧಿಗಳಾದ ನಮಗೆಲ್ಲರಿಗೂ ಹೆಚ್ಚು ಸಹಾಯವಾಗುತ್ತದೆ ಎಂದು ತಿಳಿಸಿದರು.
ಪ್ರೆಸ್ ಫಾರಂ ಅಧ್ಯಕ್ಷ ಟಿ. ರಾಜನ್ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ವಿಶ್ವವಿದ್ಯಾಲಯದ ಮಾಜಿ ಪರೀಕ್ಷಾ ನಿಯಂತ್ರಕ ಪೆÇ್ರ. ಕೆ. ಪಿ. ಜಯರಾಜನ್ ಸಂಸ್ಮರಣಾ ಭಾಷಣ ಮಾಡಿದರು. ಚೆರುವತ್ತೂರು ಗ್ರಾಪಂ ಅಧ್ಯಕ್ಷೆ ಸಿ. ವಿ. ಪ್ರಮೀಳ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭ ದೀರ್ಘ ಕಾಲದಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಕೆ.ವಿ. ಕುಞÂಕೃಷ್ಣನ್ ಮತ್ತು ರಾಜ್ಯ ಕುಟುಂಬಶ್ರೀ ಪ್ರಶಸ್ತಿ ವಿಜೇತ ಸಿಡಿಎಸ್ ಅಧ್ಯಕ್ಷೆ ಶ್ರೀಜಾ ದಿಲೀಪ್ ಅವರನ್ನು ಸನ್ಮಾನಿಸಲಾಯಿತು. ಬಾಲಚಂದ್ರನ್ ಎರಾವಿಲ್ ಅವರನ್ನು ಪರಿಚಯಿಸಿದರು. ಫಾರ್ಮರ್ಸ್ ಬ್ಯಾಂಕ್ ಅಧ್ಯಕ್ಷ ವಿ.ಕೃಷ್ಣನ್ ಮಾಸ್ಟರ್, ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ರಾಜೀವನ್ ಮಾಸ್ಟರ್, ಸಿಎನ್‍ಇಟಿ ಚಾನೆಲ್ ಎಂಡಿ ಸುಕೇಶ್ ಕುಮಾರ್, ಕುಟ್ಟಮ್ಮತ್ ಯಂಗ್‍ಮೆನ್ಸ್ ಕ್ಲಬ್ ಅಧ್ಯಕ್ಷ ಜಿ.ಜಯಪ್ರಕಾಶ್, ಕೆ.ವಿ. ಕುಞÂಕೃಷ್ಣನ್, ಶ್ರೀಜಾ ದಿಲೀಪ್ ಉಪಸ್ಥಿತರಿದ್ದರು. ಒತ್ತಿರಿವೇದಿಕೆ ಕಾರ್ಯದರ್ಶಿ ಉದಿನೂರ್ ಸುಕುಮಾರನ್ ಸ್ವಾಗತಿಸಿದರು. ಸುಧೀರನ್ ಮಯ್ಯಿಚ್ ವಂದಿಸಿದರು.





