ಕಾಸರಗೋಡು: ನಗರದ ಎರಿಯಾಲ್ ರಾಷ್ಟ್ರೀಯ ಹೆದ್ದಾರಿ ಸನಿಹದ ಸರ್ವೀಸ್ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡ ಸರಕುಸಾಗಾಟದ ಲಾರಿ ಹದಿನಾಲ್ಕು ಬೈಕ್‍ಗಳಿಗೆ ಹಾಗೂ ರಸ್ತೆ ಅಂಚಿನ ವಿದ್ಯುತ್ ಕಂಬಗಳಿಗೂ ಡಿಕ್ಕಿಯಾಗಿ, ಧರೆಗೆ ಬಡಿದುನಿಂತಿದೆ.
ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಬೆಳಗಿನ ಜಾವ ಆಗಮಿಸುತ್ತಿದ್ದ ಲಾರಿ, ಅಡ್ಕತ್ತಬೈಲ್ ಸನಿಹದ ಎರಿಯಾಲ್ ತಲುಪುತ್ತಿದ್ದಂತೆ ಸರ್ವೀಸ್ ರಸ್ತೆಮೂಲಕ ಯರ್ರಾಬಿರಿಯಾಗಿ ಸಂಚರಿಸಿ ರಸ್ತೆ ರಸ್ತೆ ಅಂಚಿಗೆ ನಿಲ್ಲಿಸಲಾಗಿದ್ದ ಬೈಕ್‍ಗಳಿಗೆ ಡಿಕ್ಕಿಯಾಗುತ್ತಾ ಸಾಗಿದೆ. ಬೆಳಗ್ಗಿನ ಹೊತ್ತು ಅಪಘಾತ ಸಂಭವಿಸಿದ್ದು, ಜನಸಂಚಾರವಿಲ್ಲದಿದ್ದ ಹಿನ್ನೆಲೆಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕ ನಿದ್ದೆಗೆ ಜಾರಿರುವುದು ಅಪಘಾತಕ್ಕೆ ಕಾರಣವೆನ್ನಲಾಗಿದೆ. ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿರುವ ಇತರ ರಾಜ್ಯ ಕಾರ್ಮಿಕರ ಬೈಕ್‍ಗಳು ಹಾನಿಗೀಡಾಗಿದೆ.




