ಕಾಸರಗೋಡು: ಜಿಲ್ಲೆಯ ನಾನಾ ಶಕ್ತಿ ಕೇಂದ್ರಗಳಲ್ಲಿ ನವರಾತ್ರಿ ಮಹೋತ್ಸವ ಸೆ. 22ರಿಂದ ಆರಂಭಗೊಳ್ಳಲಿದ್ದು, ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಕಾಸರಗೋಡು ಕೊರಕ್ಕೋಡು ಶ್ರೀ ಆರ್ಯಕಾತ್ರ್ಯಾಯಿನಿ ದೇವಸ್ಥಾನ, ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕಾಸರಗೋಡು ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರ, ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನ, ಮಧೂರು ಶ್ರೀ ಕಾಳಿಕಾಂಬಾ ಮಠ, ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತೀ)ವಿಷ್ಣುಮೂರ್ತಿ ದೇವಸ್ಥಾನ, ಬಜಕೂಡ್ಲು ಶ್ರೀ ದುರ್ಗಾಪರಮೇಶ್ವರೀ ಭಜನಾಮಂದಿರ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ನವರಾತ್ರಿ ಮಹೋತ್ಸವ ಆಚರಣೆ ನಡೆಯಲಿದೆ.
ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಆನೆಗುಂದಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ದಿವ್ಯಾಶೀರ್ವಾದಗಳೊಂದಿಗೆ, ಮಾಯಿಪ್ಪಾಡಿ ಪುರೋಹಿತ ಬ್ರಹ್ಮಶ್ರೀ ಮಾಧವ ಆಚಾರ್ಯ ಅವರ ಣೇತೃತ್ವದಲ್ಲಿ ಶರನ್ನವರಾತ್ರಿ ಮಹೋತ್ಸವ ಸೆ. 22ರಿಂದ ಅ. 2ರ ವರೆಗೆ ಜರುಗಲಿದೆ. ವಿವಿಧ ದಿನಗಳಲ್ಲಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು. ಸೆ. 29ರಂದು ಬೆಳಗ್ಗೆ 8ಕ್ಕೆ ಚಂಡಿಕಾ ಹೋಮ, ಅ. 2ರಂದು ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ.





