ಕಾಸರಗೋಡು: ಶ್ರೀ ನಾರಾಯಣ ಧರ್ಮ ಪರಿಪಾಲನಂ(ಎಸ್‍ಎನ್‍ಡಿಪಿ) ಕಾಸರಗೋಡು ಯೂನಿಯನ್ ಸೆಂಟರ್ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸಮಾಧಿ ದಿನಾಚರಣೆ ಯೂನಿಯನ್ ಕಛೇರಿಯಲ್ಲಿ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಗುರುಪೂಜೆ ಮತ್ತು ಪುಷ್ಪ ಸಮರ್ಪಣೆ ನಡೆಯಿತು. ಎಸ್‍ಎನ್‍ಡಿಪಿ ಸಭಾ ನಿರ್ದೇಶಕ ವಕೀಲ ಪಿ. ಕೆ. ವಿಜಯನ್ ಅವರು ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರಕ್ಕೆ ಪಉಷ್ಪಾರ್ಚನೆ ಸಲ್ಲಿಸುವ ಮೂಲಕ ಸಮಾರಂಭ ಉದ್ಘಾಟಿಸಿದರು. ಒಕ್ಕೂಟದ ಕಾರ್ಯದರ್ಶಿ ಗಣೇಶ್ ಪಾರೆಕಟ್ಟ ಮುಖ್ಯ ಭಾಷಣ ಮಾಡಿದರು. ಒಕ್ಕೂಟದ ಪಂಚಾಯಿತಿ ಸಮಿತಿ ಸದಸ್ಯರಾದ ಮೋಹನನ್ ಮೀಪುಗುರಿ, ರಾಜೇಶ್ ಕಾರಡ್ಕ, ನಾಗೇಶ್ ಕುಂಬಳೆ, ವಿಜಯನ್ ಮನ್ನಿಪ್ಪಾಡಿ, ಕೃಷ್ಣನ್ ಕೂಡ್ಲು, ನಾರಾಯಣ ಪುಂಡೂರು, ಕೇಶವ ಮಾಡ, ಕೃಷ್ಣನ್ ಪಾರಕಟ್ಟ, ಜಯಂತ ಪಚ್ಚಂಬಳ, ಮೋಹಿನಿ ಹರೀಶ್, ಮತ್ತು ಸುನೀತಾ ದಾಮೋದರನ್ ಉಪಸ್ಥಿತರಿದ್ದರು.





