HEALTH TIPS

ಸ್ಥಳೀಯಾಡಳಿತ ಚುನಾವಣೆ-ರಾಜಕೀಯ ಪಕ್ಷಗಳಿಗೆ ಚಿಹ್ನೆ ಹಂಚಿಕೆ ಬಗ್ಗೆ ಕರಡು ಅಧಿಸೂಚನೆ

ಕಾಸರಗೋಡು: ರಾಜ್ಯ ಚುನಾವಣಾ ಆಯೋಗವು ರಾಜ್ಯದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷಗಳಿಗೆ ಚಿಹ್ನೆಗಳನ್ನು ಹಂಚಿಕೆ ಮಾಡುವ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಅಧಿಸೂಚನೆ ಘೋಷಣೆಯಾದ 15 ದಿನಗಳ ಒಳಗೆ ಆಯೋಗ ಕಾರ್ಯದರ್ಶಿಗೆ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಎ. ಶಹಜಹಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಕರಡು ಅಧಿಸೂಚನೆಯನ್ನು www.sec.kerala.gov.in ವೆಬ್‍ಸೈಟ್‍ನಲ್ಲಿ ಪರಿಶೀಲಿಸಬಹುದಾಗಿದೆ. ರಾಜಕೀಯ ಪಕ್ಷಗಳಿಗೆ ಚಿಹ್ನೆಗಳನ್ನು ಹಂಚಿಕೆ ಮಾಡುವ ಅಧಿಸೂಚನೆಯು 2025 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ.

ಮೊದಲ ಪಟ್ಟಿಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಆಮ್ ಆದ್ಮಿ ಪಕ್ಷ (ಪೆÇರಕೆ), ಬಹುಜನ ಸಮಾಜ ಪಕ್ಷ (ಆನೆ), ಭಾರತೀಯ ಜನತಾ ಪಕ್ಷ (ಕಮಲ), ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸಿಸ್ಟ್) (ಕತ್ತಿ-ಸುತ್ತಿಗೆ-ನಕ್ಷತ್ರ),  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಹಸ್ತ), ನ್ಯಾಶನಲ್ ಪೀಪಲ್ಸ್ ಪಾರ್ಟಿ(ಪುಸ್ತಕ)ಚಿಹ್ನೆ ಮಂಜೂರುಗೊಳಿಸಲಾಗಿದೆ.

ಎರಡನೇ ಪಟ್ಟಿಯಲ್ಲಿ, ಕೇರಳ ರಾಜ್ಯ ಪಕ್ಷಗಳಾದ ಭಾರತೀಯ ಕಮ್ಯುನಿಸ್ಟ್ ಪಕ್ಷ (ಕತ್ತಿ, ತೆನೆ), ಜನತಾ ದಳ (ಜಾತ್ಯತೀತ) (ತೆನೆ ಹೊತ್ತ ಮಹಿಳೆ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಎಣಿ), ಕೇರಳ ಕಾಂಗ್ರೆಸ್ (ಎಂ) (ಎರಡು ಎಲೆಗಳು), ಕೇರಳ ಕಾಂಗ್ರೆಸ್ (ಆಟೋ ರಿಕ್ಷಾ), ಮತ್ತು ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ (ಮಣ್ಣಿನ ಮಡಕೆ ಮತ್ತು ಮಣ್ಣಿಕ ಸೌಟು)ಮಂಜೂರುಮಾಡಲಾಗಿದೆ.

ಮೂರನೇ ಪಟ್ಟಿಯಲ್ಲಿ, ಇತರ ರಾಜ್ಯಗಳ ಮಾನ್ಯತೆ ಪಡೆದ ಪಕ್ಷಗಳಿಗೆ ಮತ್ತು ಕೇರಳ ವಿಧಾನಸಭೆ ಅಥವಾ ರಾಜ್ಯದ ಯಾವುದೇ ಸ್ಥಳೀಯಾಡಳಿತ ಸಂಸ್ಥೆಯ ಸದಸ್ಯರಾಗಿರುವ ಮತ್ತು ಕೇಂದ್ರ ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾದ 28 ರಾಜಕೀಯ ಪಕ್ಷಗಳಿಗೆ ಚಿಹ್ನೆಯನ್ನು ನೀಡಲಾಗಿದೆ.

ನಾಲ್ಕನೇ ಪಟ್ಟಿಯಲ್ಲಿರುವ 73 ಸ್ವತಂತ್ರ ಅಭ್ಯರ್ಥಿಗಳಿಗೆ 1, 2 ಮತ್ತು 3ನೇ ಪಟ್ಟಿಯಲ್ಲಿ ಒಳಪಡದ ಮತ್ತು ಕೇಂದ್ರ ಚುನಾವಣಾ ಆಯೋಗದಲ್ಲಿ ನೋಂದಾಯಿಸಲ್ಪಟ್ಟ, ಆದ್ಯತೆಯ ಆಧಾರದ ಮೇಲೆ ಸ್ವತಂತ್ರ ಚಿಹ್ನೆಗಳನ್ನು ಹಂಚಿಕೆ ಮಾಡಲಾಗುವುದು.

ಅರ್ಜಿಯೊಂದಿಗೆ ಕೇಂದ್ರ ಚುನಾವಣಾ ಆಯೋಗವು ನೀಡಿದ ನೋಂದಣಿ ಪ್ರಮಾಣಪತ್ರದ ಪ್ರತಿ ಮತ್ತು ರಾಜ್ಯ ಪದಾಧಿಕಾರಿಗಳನ್ನು ನಿಯೋಜಿಸುವ ಪವರ್ ಆಫ್ ಅಟಾರ್ನಿಯನ್ನು ಒದಗಿಸಬೇಕು. ಸ್ವತಂತ್ರ ಚಿಹ್ನೆಗಳ ಪಟ್ಟಿಯಲ್ಲಿರುವ ಮತ್ತು ಇತರ ರಾಜಕೀಯ ಪಕ್ಷಗಳಿಗೆ ನೀಡದ ಚಿಹ್ನೆಯನ್ನು ಆದ್ಯತೆಯ ಆಧಾರದ ಮೇಲೆ ಹಂಚಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries