ಕಾಸರಗೋಡು: ಗ್ರಂಥಾಲಯ ಸೌಲಭ್ಯಗಳಿಲ್ಲದ ಪ್ರದೇಶಗಳಲ್ಲಿ ಜನರಲ್ಲಿ ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ, ಸಮಗ್ರ ಶಿಕ್ಷಾ ಕೇರಳ ಕಾಸರಗೋಡು ಮತ್ತು ಬಿಆರ್‍ಸಿ ಕಾಸರಗೋಡು ಜಂಟಿಯಾಗಿ ಜಾರಿಗೆ ತಂದಿರುವ ವಿಶಿಷ್ಟ ಯೋಜನೆ ಸಂಚರಿಸುವ ಗ್ರಂಥಾಲಯಕ್ಕೆ ಬೇಡಡ್ಕ ಗ್ರಾಪಂನಲ್ಲಿ ಚಾಲನೆ ನೀಡಲಾಯಿತು.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎನ್. ಸರಿತಾ. ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಾಚನ ಕೂಟ ಪ್ರತಿಭಾ ಪುರಸ್ಕಾರ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಮಾಧವನ್, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವರದರಾಜನ್, ವಾರ್ಡ್ ಸದಸ್ಯರಾದ ಎಂ.ಗೋಪಾಲಕೃಷ್ಣನ್, ಎಂ.ನಾರಾಯಣನ್, ಎಂ.ತಂಬಾನ್, ಕೆ.ರಘುನಾಥನ್, ಇ.ರಜನಿ, ಡಿ.ವತ್ಸಲಾ ಉಪಸ್ಥಿತರಿದ್ದರು. ಬಿ.ಪಿ.ಸಿ. ಟಿ. ಕಾಸಿಮ್ ಸ್ವಾಗತಿಸಿದರು. ವೈವಿಧ್ಯತೆ ಸಂಯೋಜಕಿ ರೋಶ್ನಾ ವಂದಿಸಿದರು
ಬಿಆರ್‍ಸಿ ತರಬೇತುದಾರ ನೈಸಿಲಿ ಮತ್ತು ಸಿಆರ್‍ಸಿ ಸಂಯೋಜಕರಾದ ಅಬ್ದುಲ್ ಹಕೀಮ್, ಅಬ್ದುಲ್ ಖಾದರ್ ಜಾಹಿದ್, ಶ್ರುತಿ ಮತ್ತು ರಶ್ಮಿ ಅವರ ನೇತೃತ್ವದಲ್ಲಿ 'ಉನ್ನತಿ'(ಕಾಲನಿ)ಗೆ ಭೇಟಿ ನೀಡಿ ಪುಸ್ತಕ ವಿತರಿಸಲಾಯಿತು.





