ಕಾಸರಗೋಡು: ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅ. ಎಡನೀರು 13ಮತ್ತು 14ರಂದು ನಡೆಯಲಿರುವ ಕಾಸರಗೋಡು ಉಪ ಜಿಲ್ಲಾ ಶಾಲಾ ವಿಜ್ಞಾನ ಮೇಳಕ್ಕಾಗಿ ಲಾಂಛನ (ಲೋಗೋ)ವನ್ನು ಆಹ್ವಾನಿಸಲಾಗಿದೆ.
ಕಾಸರಗೋಡು ಜಿಲ್ಲೆಯ ವಿದ್ಯಾಲಯಗಳಲ್ಲಿನ ಪ್ರೈಮರಿಯಿಂದ ಹೈಯರ್ ಸೆಕೆಂಡರಿ ವರೆಗಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದು. ಲಾಂಛನವು ಇಮೇಜ್ ಫೈಲ್ ನಲ್ಲಿ ಎ-4 ಅಥವಾ ಎ-3 ಅಳತೆಯಲ್ಲಿದ್ದು ವಿಜ್ಞಾನ ಮೇಳದ ಆಶಯವನ್ನು ಒಳಗೊಂಡಿರಬೇಕು. ಆಯ್ಕೆಯಾದ ಲಾಂಛನಕ್ಕೆ ಬಹುಮಾನ ನೀಡಲಾಗುವುದು. ಲಾಂಛನವನ್ನು edneer2025@gmail.com ಎಂಬ ವಿಳಾಸಕ್ಕೆ ಸೆಪ್ಟೆಂಬರ್ 18 ರ ಒಳಗಾಗಿ ಕಳುಹಿಸಿಕೊಡುವಂತೆ ಪ್ರಕಟಣೆ ತಿಳಿಸಿದೆ.




