ಕಾಸರಗೋಡು: ಪೋಕ್ಸೋ ಪ್ರಕರಣದಲ್ಲಿ ಉಪಜಿಲ್ಲಾ ವಿದ್ಯಾಧಿಕಾರಿ(ಎಇಒ)ಯನ್ನು ಅಮಾನತುಗೊಳಿಸಲಾಗಿದೆ. ಬೇಕಲ ಉಪಜಿಲ್ಲಾ ಶಿಕ್ಷಣಾಧಿಕಾರಿ ಒವಿಕೆ ಸೈನುದೀನ್ ಅವರನ್ನು ಅಮಾನತುಗೊಳಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಈ ಆದೇಶ ಹೊರಡಿಸಿದ್ದಾರೆ. ಅಪ್ರಾಪ್ತ ಬಾಲಕನ ಮೇಲೆ ಅಸ್ವಾಭಾವಿಕ ಕಿರುಕುಳ ಪ್ರಕರಣದಲ್ಲಿ ಅವರು ರಿಮಾಂಡ್‍ನಲ್ಲಿದ್ದಾರೆ.
ಮಗು ಎರಡು ವರ್ಷಗಳ ಹಿಂದೆ ಡೇಟಿಂಗ್ ಅಪ್ಲಿಕೇಶನ್‍ನ ಸದಸ್ಯನಾಗಿದ್ದ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಭ್ಯವಿರುವ ಡೇಟಿಂಗ್ ಅಪ್ಲಿಕೇಶನ್‍ನಲ್ಲಿ ತಪ್ಪು ಮಾಹಿತಿಯನ್ನು ನೀಡುವ ಮೂಲಕ ಮಗು ಸದಸ್ಯನಾದ. ಮಗುವಿನ ಮನೆಯಿಂದ ಒಬ್ಬ ವ್ಯಕ್ತಿ ಅಸಾಮಾನ್ಯ ರೀತಿಯಲ್ಲಿ ಹೊರಹೋಗುತ್ತಿರುವುದನ್ನು ಗಮನಿಸಿದ ತಾಯಿ 16 ವರ್ಷದ ಬಾಲಕನನ್ನು ಪ್ರಶ್ನಿಸಿದಾಗ ಮತ್ತು ಅವನನ್ನು ಕೌನ್ಸೆಲಿಂಗ್‍ಗೆ ಒಳಪಡಿಸಿದಾಗ ದೌರ್ಜನ್ಯದ ಬಗ್ಗೆ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಪೋಲೀಸರಿಗೆ 16 ವರ್ಷದ ಬಾಲಕನ ಹೇಳಿಕೆಯಲ್ಲಿ ಎರಡು ವರ್ಷಗಳ ಕಾಲ 18 ಜನರಿಂದ ದೌರ್ಜನ್ಯಕ್ಕೊಳಗಾಗಿದ್ದಾಗಿ ಹೇಳಲಾಗಿದೆ. ಡೇಟಿಂಗ್ ಅಪ್ಲಿಕೇಶನ್ ಏಜೆಂಟ್ ಮಗುವನ್ನು ಆರೋಪಿಗೆ ಒಪ್ಪಿಸಿದ್ದರು. ಚಂದೇರ ಪೋಲೀಸ್ ಠಾಣೆಯಲ್ಲಿ ಆರು ಪ್ರಕರಣಗಳು ಮತ್ತು ಕಣ್ಣೂರು, ಕೋಝಿಕ್ಕೋಡ್ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ. ಪಾಲಕ್ಕಾಡ್ ರೈಲ್ವೆ ವಿಭಾಗದ ಉದ್ಯೋಗಿ ಸೇರಿದಂತೆ 9 ಜನರನ್ನು ಪೋಲೀಸರು ಬಂಧಿಸಿದ್ದಾರೆ. ಇತರ 9 ಆರೋಪಿಗಳಿಗಾಗಿ ತನಿಖೆ ಮುಂದುವರೆದಿದೆ. ಪ್ರಕರಣದಲ್ಲಿ ಆರೋಪಿಯಾಗಿರುವ ಯೂತ್ ಲೀಗ್ ನಾಯಕ ತಲೆಮರೆಸಿಕೊಂಡಿದ್ದಾನೆ.

