ಬದಿಯಡ್ಕ : ಶಿಕ್ಷಕರ ದಿನಾಚರಣೆಯಂಗವಾಗಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಸುನಂದ ಟೀಚರ್ ಕುಂಬಳೆ, ಶಿರಿಬಾಗಿಲು ಜಿಡಬ್ಲ್ಯುಎಲ್ ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲ ಟೀಚರ್ ಸೂರಂಬೈಲು ಮತ್ತು ಚಾಯೋತ್ ಜಿಎಚ್.ಎಸ್.ಎಸ್. ಶಾಲಾ ಉಪನ್ಯಾಸಕಿ ಆಶಾಕಿರಣ್ ದರ್ಬೆತ್ತಡ್ಕ ಅವರನ್ನು ಅವರವರ ಸ್ವಗೃಹಕ್ಕೆ ತೆರಳಿ ಗೌರವಿಸಲಾಯಿತು.
ಅಂಬೇಡ್ಕರ್ ವಿಚಾರ ವೇದಿಕೆಯ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ.ಕೆ. ಉಳಿಯತ್ತಡ್ಕ, ಅಂಬೇಡ್ಕರ್ ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ, ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ದರ್ಬೆತ್ತಡ್ಕ, ಬದಿಯಡ್ಕ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಗಂಗಾಧರ ಗೋಳಿಯಡ್ಕ, ನಿವೃತ್ತ ಸಬ್ ರಿಜಿಸ್ಟ್ರಾರ್ ರಾಮ ಸೂರಂಬೈಲು, ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ, ಕಾರ್ಯದರ್ಶಿ ಸುಂದರ ಬಾರಡ್ಕ, ಸಂದೇಶ್ ಕುಂಬಳೆ, ಅಶ್ವಿನ್ ಕುಂಬಳೆ, ಗೋಪಾಲಕೃಷ್ಣ ದರ್ಬೆತ್ತಡ್ಕ, ಉಷಾಕಿರಣ ದರ್ಬೆತ್ತಡ್ಕ, ನೆಹಾರಿಕ ದರ್ಬೆತ್ತಡ್ಕ ಮೊದಲಾದವರು ಜೊತೆಗಿದ್ದರು .






