HEALTH TIPS

ಬಿಹಾರದ ಬಗ್ಗೆ ವಿವಾದಾತ್ಮಕ ಪೋಸ್ಟ್: ವಿ.ಟಿ. ಬಲರಾಮ್ ಅವರನ್ನು ಹುದ್ದೆಯಿಂದ ತೆಗೆದುಹಾಕಿದ ಕೆ.ಪಿ.ಸಿ.ಸಿ.

ತಿರುವನಂತಪುರಂ: ಬಿಹಾರದ ಬಗ್ಗೆ ವಿವಾದಾತ್ಮಕ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ಸ್ ಮುಖಂಡ ವಿ.ಟಿ. ಬಲರಾಮ್ ಅವರನ್ನು ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ಹುದ್ದೆಯಿಂದ ತೆಗೆದುಹಾಕಿದೆ.

ಜಿಎಸ್ಟಿ ವಿಷಯದ ಕುರಿತು ಕಾಂಗ್ರೆಸ್ ಕೇರಳದ ಎಕ್ಸ್-ಪ್ಲಾಟ್‍ಫಾರ್ಮ್‍ನಲ್ಲಿ ಬೀಡಿ ಮತ್ತು ಬಿಹಾರವನ್ನು ಹೋಲಿಸುವ ಪೋಸ್ಟ್ ವಿವಾದಾತ್ಮಕವಾಗಿತ್ತು.

ರಾಹುಲ್ ಗಾಂಧಿಯವರ ಬಿಹಾರದ ಮತ ಶಕ್ತಿ ಯಾತ್ರೆಯ ನಂತರ ಪೋಸ್ಟ್ ಮಾಡಿದ ಬರಹ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಯಾಗಿತ್ತು. ಈ ಪೋಸ್ಟ್ ಅನ್ನು ನಂತರ ಹಿಂತೆಗೆದುಕೊಳ್ಳಲಾಯಿತು.

ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಈ ವಿಷಯದಲ್ಲಿ ಬಲರಾಮ್ ತಪ್ಪು ಎಂದು ಒಪ್ಪಿಕೊಂಡರು ಮತ್ತು ಅವರನ್ನು ರಾಜೀನಾಮೆ ನೀಡುವಂತೆ ಸೂಚಿಸಲಾಯಿತು ಎಂದಿರುವರು.  ಸಾಮಾಜಿಕ ಮಾಧ್ಯಮ ವಿಭಾಗವನ್ನು ಸಂಪೂರ್ಣವಾಗಿ ಮರುಸಂಘಟಿಸಲಾಗುವುದು ಎಂದು ಸನ್ನಿ ಸ್ಪಷ್ಟಪಡಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries