ಕಾಸರಗೋಡು: ಪೆರಿಯ ಆಯಂಕಡವು ಹೊಳೆಯಲ್ಲಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಆಯಂಕಡವು ಸನಿಹದ ಬಂಗಾಡ್ ಹೊಳೆಯಲ್ಲಿ ಪತ್ತೆಯಾಗಿದೆ. ಉದುಯಪುರಂ ತಡಿಯಂವಳಪ್ಪು ನಿವಾಸಿ, ಶೋರೂಮ್ ಸಿಬ್ಬಂದಿ ಸಜಿತ್‍ಲಾಲ್(26)ಮೃತಪಟ್ಟ ಯುವಕ. ಶೋರೂಮ್‍ನಲ್ಲಿ ನಡೆಯುವ ಓಣಂ ಆಚರಣೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವುದಾಗಿ ಮನೆಯವರಲ್ಲಿ ತಿಳಿಸಿ ಸಜಿತ್‍ಲಾಲ್ ಸೆ. 4ರಂದು ಹೊರಟವರು ನಾಪತ್ತೆಯಾಗಿದ್ದರು. ಇವರ ಚಪ್ಪಲಿ, ಬೈಕ್, ಹಾಗೂ ಹೆಲ್ಮೆಟ್ ಸೇತುವೆ ಸನಿಹದಿಂದ ಪತ್ತೆಹಚ್ಚಲಾಗಿತ್ತು. ಹೊಳೆಗೆ ಧುಮುಕಿರುವ ಸಂಶಯದಿಂದ ಅಗ್ನಿಶಾಮಕದಳ, ಪೊಲೀಸ್ ಹಾಗೂ ಸ್ಥಳೀಯ ನಿವಾಸಿಗಳು ಹುಡುಕಾಟ ನಡೆಸಿದ್ದರೂ, ಇವರನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆಸೆ. 8ರಂದು ಇವರ ಮೃತದೇಹ ಬಾಂಗಾಡ್ ಹೊಳೆ ಸನಿಹದ ಮರದಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತಯಾಗಿದೆ. ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




