ಕಾಸರಗೋಡು: ಬೈಕ್ ಪಲ್ಟಿಯಾಗಿ ಸವಾರ ಬೇತೂರ್‍ಪಾರ ತೀರ್ಥಂಗರ ನಿವಾಸಿ, ಯುವ ಇಂಜಿನಿಯರ್ ಎಂ. ಜಿತೇಶ್(23)ಮೃತಪಟ್ಟಿದ್ದಾರೆ. ಬೋವಿಕ್ಕಾನದಿಂದ ಬೇತೂರ್‍ಪಾರಕ್ಕೆ ಬೈಕಲ್ಲಿ ಸಂಚರಿಸುತ್ತಿರುವ ಮಧ್ಯೆ, ಮಂಜಕ್ಕಲ್ ಎಂಬಲ್ಲಿ ಆಟೋರಿಕ್ಷಾ ಹಿಂದಿಕ್ಕಿ ಸಂಚರಿಸಲು ಯತ್ನಿಸುತ್ತಿದ್ದಂತೆ ಬೈಕ್ ಪಲ್ಟಿಯಾಗಿ ಬಸ್ ತಂಗುದಾಣದ ಕಂಬಕ್ಕೆ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಏರೋನಾಟಿಕಲ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಇವರು, ಓಣಂಗಾಗಿ ರಜೆ ಪಡೆದು ಊರಿಗೆ ಆಗಮಿಸಿದ್ದರು. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




