ಕಾಸರಗೋಡು: ಕಾಞಂಗಾಡು ಸನಿಹದ ಪೂಚಕ್ಕಾಡ್ ಎಂಬಲ್ಲಿ ಹೋಟೆಲ್ ಒಂದರಿಂದ ಶವರ್ಮ ಸೇವಿಸಿದ 15ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಲ್ಲಿ ಅಸೌಖ್ಯ ಕಾಣಿಸಿಕೊಂಡಿದ್ದು, ಇವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಿಫಾ ಫಾತಿಮಾ, ಫಾತಿಮತ್‍ಸಾಕಿಯಾ, ನಫೀಸಾ ಮೆಹ್‍ಸಾ, ನಫೀಸತ್ ಸುಲ್ಫಾ ಸೇರಿದಂತೆ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಅಸೌಖ್ಯ ಕಾಣಿಸಿಕೊಂಡಿರುವ ವಿದ್ಯಾರ್ಥಿಗಳ ಬಗ್ಗೆ ನಿಗಾಯಿರಿಸಲಾಗಿದೆ.
ಪೂಚಕ್ಕಾಡಿನ ಮಸೀದಿಯೊಂದರಲ್ಲಿ ನಬಿದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಈ ವಿದ್ಯಾರ್ಥಿಗಳು ಸನಿಹದ ಹೋಟೆಲ್‍ಗೆ ತೆರಳಿ ಶವರ್ಮ ಸೇವಿಸಿದ್ದರು. ಭಾನುವಾರ ಇವರಿಗೆ ತಲೆಸುತ್ತು, ವಾಂತಿ ಸೇರಿದಂತೆ ವಿವಿಧ ಅಸೌಖ್ಯ ಕಾಣಿಸಿಕೊಂಡಿತ್ತು. ಕಾಲಾವಧಿ ಕಳೆದ ಶವರ್ಮ ಸೇವಿಸಿರುವುದು ಅಸೌಖ್ಯ ಕಾಣಿಸಿಕೊಳ್ಳಲು ಕಾರಣವೆನ್ನಲಾಗಿದೆ.




